ರಾಜ್ಯದ ಕೆಪಿಸಿಸಿ ಅಧ್ಯಕ್ಷ ಹುದ್ದೆಗಾಗಿ ಯಾರನ್ನು ನೇಮಕ ಮಾಡಬೇಕು ಅನ್ನೋ ಗೊಂದಲದ ಸನ್ನಿವೇಶ ಇನ್ನೂ ಮುಂದುವರಿಯೋ ಲಕ್ಷಣಗಳು ಗೋಚರಿಸಿವೆ.
ಈ ನಡುವೆ ಯಾವುದೇ ಕಾರಣಕ್ಕೂ ಕೆಪಿಸಿಸಿ ಅಧ್ಯಕ್ಷ ಹುದ್ದೆ ನನಗೆ ಬೇಡವೇ ಬೇಡ. ಹೀಗಂತ ಕೇಂದ್ರ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ಖಡಕ್ಕಾಗಿ ಹೇಳಿದ್ದಾರೆ.
ಕಾಂಗ್ರೆಸ್ ನ ಮೂಲ ಮುಖಂಡರು ಖರ್ಗೆಗೆ ಅಧ್ಯಕ್ಷರಾಗುವಂತೆ ಒತ್ತಡ ಹೇರುತ್ತಿದ್ದಾರೆ. ಈ ನಡುವೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಖರ್ಗೆ ನಿರಾಸಕ್ತಿ ವಹಿಸಿರೋದನ್ನು ನೇರವಾಗಿ ಸ್ಪಷ್ಟಪಡಿಸಿದ್ದಾರೆ.
ಶೀಘ್ರದಲ್ಲಿಯೇ ಕೆಪಿಸಿಸಿ ಅಧ್ಯಕ್ಷರು ಯಾರಾಗಬೇಕೆಂಬುದನ್ನು ಹೈಕಮಾಂಡ್ ನಿರ್ಧಾರ ಮಾಡಲಿದೆ ಅಂತ ಖರ್ಗೆ ಹೇಳಿದ್ದಾರೆ.