ಬೆಂಗಳೂರು: ರಾಜ್ಯ ವಿಧಾನಮಂಡಲ ಅಧಿವೇಶನ ಆರಂಭವಾಗಿ ನಾಲ್ಕು ದಿನಗಳಾಗಿವೆ. ಕಿರು ಅವಧಿಯ ಅಧಿವೇಶನವಾದರೂ, ನಮ್ಮ ಶಾಸಕರು, ಮಂತ್ರಿಗಳಿಗೆ ಅಧಿವೇಶನಕ್ಕೆ ಹಾಜರಾಗಲೂ ಪುರುಸೊತ್ತಿಲ್ಲ.
ಕಳೆದ ಎರಡು ದಿನಗಳಿಂದಲೂ ಅಧಿವೇಶನದಲ್ಲಿ ಕುರ್ಚಿಗಳೇ ಕಾಣಿಸುತ್ತಿತ್ತಷ್ಟೇ. ಶಾಸಕರು, ಸಚಿವರುಗಳ ಗೈರು ಹಾಜರಿ ಎದ್ದು ಕಾಣುತ್ತಿತ್ತು. ಮುಖ್ಯಮಂತ್ರಿಗಳು ಸ್ವತಃ ಸಭೆ ನಡೆಸಿ ಸರ್ಕಾರದ ಯೋಜನೆಗಳ ಕುರಿತು ಚರ್ಚೆ ನಡೆಸುವಾಗ ಸಚಿವರುಗಳು ಕಡ್ಡಾಯವಾಗಿ ಹಾಜರಿರಬೇಕೆಂದು ಸೂಚನೆ ನೀಡಿದ್ದರೂ ಪ್ರಯೋಜನವಾಗಿಲ್ಲ.
ಸ್ಪೀಕರ್ ಕೂಡಾ ಬರ ಸಮಸ್ಯೆಯಂತಹ ಪ್ರಮುಖ ವಿಷಯಗಳ ಚರ್ಚೆ ನಡೆಯುವಾಗ ಎಲ್ಲರೂ ಕಡ್ಡಾಯವಾಗಿ ಹಾಜರಿರಬೇಕೆಂದು ಸೂಚಿಸಿದ್ದರೂ ಕವಡೆ ಕಾಸಿನ ಕಿಮ್ಮತ್ತು ಇಲ್ಲ. ಇದ್ದುದರಲ್ಲಿ ವಿಧಾನ ಸಭೆಯೇ ಪರವಾಗಿಲ್ಲ. ಆದರೆ ವಿಧಾನ ಮಂಡಲದಲ್ಲಿ ಖಾಲಿ ಕುರ್ಚಿಗಳೇ ಹೆಚ್ಚಿತ್ತು. ಆಡಳಿತ ಪಕ್ಷದ ಕೇವಲ 22 ಶಾಸಕರು ಮಾತ್ರ ಇಂದು ಹಾಜರಿದ್ದಾರೆ. ಹೀಗಿರುವಾಗ ಯಾರಿಗೆ ಬೇಕಾಗಿ ಈ ಅಧಿವೇಶನ?
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ