ಬೆಂಗಳೂರು: ಸಿಎಂ, ಪರಮೇಶ್ವರ್ ನಡುವೆ ಭಿನ್ನಾಬಿಪ್ರಾಯ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಯಾವುದೇ ರೀತಿಯ ಅಸಮಾಧಾನ, ಭಿನ್ನಾಬಿಪ್ರಾಯವಿಲ್ಲ. ಅವರಿಬ್ಬರೂ ಸಹೋದರರಂತಿದ್ದಾರೆ ಎಂದು ರಾಜ್ಯ ಉಸ್ತುವಾರಿ ವೇಣುಗೋಪಾಲ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಇಬ್ಬರೂ ಒಟ್ಟಾಗಿಯೇ ಪಕ್ಷ ಮುನ್ನಡೆಸುತ್ತಿದ್ದಾರೆ. ಇದರಲ್ಲಿ ಯಾವುದೇ ಡೌಟ್ ಬೇಡ. ಪಕ್ಷ ಸಂಘಟನೆಯನ್ನೂ ಇಬ್ಬರೂ ಕೂಡಿಯೇ ಮಾಡುತ್ತಾರೆ. ಬಿಜೆಪಿ ವಿರುದ್ಧ ಹೋರಾಟವನ್ನೂ ನಡೆಸುತ್ತಾರೆ ಎಂದಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವವ್ಯಸ್ಥೆ ಉತ್ತಮವಾಗಿದೆ. ಕಾನೂನು ಸುವವ್ಯಸ್ಥೆ ಹಾಳು ಮಾಡೋರು ಬಿಜೆಪಿಯವರೆ. ಗೌರಿ ಲಂಕೇಶ್ ಅಂತ್ಯಸಂಸ್ಕಾರಕ್ಕೂ ಬಾರದೆ, ಅವರಿಗೆ ಅಂತಿಮ ಗೌರವ ಸಲ್ಲಿಸಿಲ್ಲ. ಗೌರಿ ಲಂಕೇಶ್ ಹತ್ಯೆ ಹಿಂದೆ ಯಾರಿದ್ದಾರೆ ಅನ್ನೋದು ಕೆಲವೇ ದಿನದಲ್ಲಿ ಗೊತ್ತಾಗುತ್ತೆ. ಗೌರಿ ಲಂಕೇಶ್ ಪ್ರಕರಣದ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿ ಮುಖಂಡರಿಗಿಲ್ಲ. ಹೀಗಿರುವಾಗ ಸರ್ಕಾರದ ವಿರುದ್ಧ ಆರೋಪ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಕಿಡಿ ಕಾರಿದ್ದಾರೆ.