Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕಾಡಂಚಿನ ಶಾಲೆಗೆ ನಿತ್ಯೋತ್ಸವ ಕವಿ ಭೇಟಿ

ಕಾಡಂಚಿನ ಶಾಲೆಗೆ ನಿತ್ಯೋತ್ಸವ ಕವಿ ಭೇಟಿ
ಚಾಮರಾಜನಗರ , ಗುರುವಾರ, 24 ಜನವರಿ 2019 (18:43 IST)
ನಿತ್ಯೋತ್ಸವ ಕವಿ ಕೆ.ಎಸ್. ನಿಸಾರ್ ಅಹಮದ್  ಕಾಡಂಚಿನ ಶಾಲೆಗೆ ಭೇಟಿ ನೀಡಿ ಮಕ್ಕಳ ಜತೆ ಕಾಲ ಕಳೆದರು.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ  ತಾಲ್ಲೂಕಿನ ಕಾಡಂಚಿನ ಗ್ರಾಮವಾದ ಮಂಗಲ ಹಿರಿಯ ಪ್ರಾಥಮಿಕ ಶಾಲೆಗೆ ನಿತ್ಯೋತ್ಸವ ಕವಿ ಕೆ.ಎಸ್. ನಿಸಾರ್ ಅಹಮದ್  ಭೇಟಿ ನೀಡಿ ಮಕ್ಕಳ ಜೊತೆ ಕೆಲಹೊತ್ತು ಕಾಲ ಕಳೆದರು. 
ಖಾಸಗಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಆಗಮಿಸಿದ ಅವರನ್ನು ಶಾಲಾ ಮುಖ್ಯೋಪಾಧ್ಯಾಯ ಅಂತೋಣಿ ಅಮ್ಮಳ್ ಅವರು ಭೇಟಿ ಮಾಡಿ ಶಾಲೆಗೆ ಬರುವಂತೆ ಮನವಿ ಮಾಡಿದರು. 

ಶಾಲೆಗೆ ಭೇಟಿ ನೀಡಿ ಮಕ್ಕಳ ಜೊತೆ ತಾವು ಐವತ್ತು ವರ್ಷ ಹಿಂದೆ ಬರೆದಿದ್ದ ಕವಿತೆಗಳನ್ನು ಮಕ್ಕಳಿಂದ ಹಾಡಿಸಿ ಖುಷಿ ಪಟ್ಟರು. ವಿದ್ಯಾರ್ಥಿಗಳ ಪಠ್ಯದಲ್ಲಿರುವ ಕವಿತೆಗಳನ್ನು ಹಾಡಿಸಿದರು.

ಬಳಿಕ ಮಾತನಾಡಿದ ಅವರು, ಕನ್ನಡ ಭಾಷೆ ಜಗತ್ತಿನ ಶ್ರೇಷ್ಠ ಭಾಷೆ. ಅದಕ್ಕೆ ತನ್ನದೇ ಆದ ಇತಿಹಾಸವಿದೆ.  ಕನ್ನಡವನ್ನು ಉತ್ತಮವಾಗಿ ಕಲಿಯಿರಿ ಎಂದು ಮಕ್ಕಳಿಗೆ ಹೇಳಿದರು. ಕರ್ನಾಟಕದ ಕೊನೆಯ ಗ್ರಾಮದಲ್ಲಿ ಬಂದು ಮಕ್ಕಳ ಜೊತೆಯಲ್ಲಿ ಬೆರೆತಿದ್ದು ಸಂತೋಷವಾಗಿದೆ. ಈ ಸಂತೋಷ ಕೋಟಿ ಕೊಟ್ಟರು ಸಿಗುವುದಿಲ್ಲ ಎಂದರು.

ಇಲ್ಲಿನ ಶಿಕ್ಷಕರು ಗ್ರಾಮಗಳಿಗೆ ಹೋಗಿ ಮಕ್ಕಳನ್ನು ಕರೆದುಕೊಂಡು  ಬರುತ್ತಾರೆ ಮತ್ತೆ ಬೀಡುತ್ತಾರೆ. ಈ ರೀತಿಯಾಗಿ ಬೆಂಗಳೂರಿನ ಯಾವ ಉನ್ನತ ಶಾಲೆಯಲ್ಲೂ ಮಾಡುವುದಿಲ್ಲ. ಈ ಎಲ್ಲಾ ಮಕ್ಕಳ ಭವಿಷ್ಯ ಉಜ್ವಲವಾಗಲಿ ಎಂದರು. 
ಮಕ್ಕಳು ವಿಶ್ವಮಾನವ ರಾಗಿ ಬೆಳೆಯಬೇಕು. ಜಾತಿ ಧರ್ಮ ದ ಸಂಕೋಲೆಗೆ ಬೀಳಬಾರದು. ವಿದ್ಯೆ, ಸಂಸ್ಕೃತಿ ಮತ್ತು ನಾಗರೀಕತೆಯಿಂದ ವಿಶ್ವಮಾನವ ಗುಣಬೆಳೆಯುತ್ತದೆ. ಈ ಗುಣವನ್ನು ಬೆಳೆಸಲು ಶಿಕ್ಷಕರು ಶ್ರಮಿಸಬೇಕು ಎಂದರು.
ಪಠ್ಯದ ಜೊತೆಯಲ್ಲಿ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚಿನ ಗಮನಕೊಡಿ, ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ಕಲೆಹಾಕಿ ಶ್ರಮವಹಿಸಿ ವಿದ್ಯಾಭ್ಯಾಸ ಮಾಡಿ ಎಂದರು.

ಹಳ್ಳಿಯಲ್ಲಿ ಮಾತ್ರ ನಮ್ಮ ಪರಂಪರೆ ಸಂಸ್ಕೃತಿ ಉಳಿದಿದೆ. ಈ ಸಂಸ್ಕೃತಿ ಪಟ್ಟಣದಲ್ಲಿ ಹುಡಕಬೇಕಿದೆ. ನಮ್ಮ ಮುಂದಿನವರಿಗೆ ತಿಳಿಸುವ ಪ್ರಯತ್ನವನ್ನು ಶಿಕ್ಷಕರು ಮಾಡಬೇಕು ಎಂದರು.



Share this Story:

Follow Webdunia kannada

ಮುಂದಿನ ಸುದ್ದಿ

ಕೊಲೆ ಯತ್ನ ಕೇಸ್: ಗ್ರಾಪಂ ಅಧ್ಯಕ್ಷ ಬಂಧನ