Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಯುಗಾದಿ ಹಬ್ಬಕ್ಕೆ ಜನರ ಖರೀದಿ ಭರಾಟೆ ಜೋರು

ಯುಗಾದಿ ಹಬ್ಬಕ್ಕೆ ಜನರ ಖರೀದಿ ಭರಾಟೆ ಜೋರು
bangalore , ಶುಕ್ರವಾರ, 1 ಏಪ್ರಿಲ್ 2022 (19:53 IST)
ನಾಡಿನೆಲ್ಲೆಡೆ ಹೊಸತಡುಕು ಯುಗಾದಿ ಹಬ್ಬದ ಸಂಭ್ರಮ ಮನೆಮಾಡಿದೆ.ಸಿಲಿಕಾನ್ ಸಿಟಿಯ ಮಾರುಕಟ್ಟೆಗಳು ಕಾಲಿಡಲಾಗದ ಮಟ್ಟಿಗೆ ಗ್ರಾಹಕರಿಂದ ತುಂಬಿ ತುಳುಕ್ತಿದೆ. ಇದರ ಜೊತೆಗೆ ಹಣ್ಣು-ಹೂಗಳ ಬೆಲೆ ಗಗನಕ್ಕೇರಿದ್ರು ಕೂಡ  ಗ್ರಾಹಕರೆಲ್ಲಾ ಹಬ್ಬದ ಶಾಪಿಂಗ್ ನಲ್ಲಿ ಬ್ಯುಸಿಯಾಗಿದ್ರುಬೇವು ಬೆಲ್ಲ ಸವಿಯುತ್ತಾ ಯುಗಾದಿ ಹಬ್ಬವನ್ನ ಆಚರಿಸುವುದಕ್ಕೆ ಬೆಂಗಳೂರು ಮಂದಿ ಸಜ್ಜಾಗಿದ್ದಾರೆ . ಹೀಗಾಗಿ ಹಬ್ಬ ಆಚರಿಸಲು ಇಂದು ಗ್ರಾಹಕರು ತಮ್ಮಗೆ ಬೇಕಾದ ವಸ್ತುಗಳನ್ನ ಕೊಳ್ಳುವುದರಲ್ಲಿ ಬ್ಯುಸಿಯಾಗಿದ್ರು. ಕಳೆದ 2 ವರ್ಷದಿಂದ ಜನರಿಗೆ ಯುಗಾದಿ ಹಬ್ಬವನ್ನ ಆಚರಿಸಲಾಗಿದಿಲ್ಲ. ಆದ್ರೆ ಈಗ ಕೋವಿಡ್ ನಿರ್ಬಂಧಗಳು ಒಂದು ಕಡೆ ಸಡಿಲಿಕೆಯಾಗಿದೆ. ಮತ್ತೊಂದು ಕಡೆ ಜನಜೀವನ ಯಥಾಸ್ಥಿತಿಗೆ ಬಂದಿದೆ. ಹೀಗಾಗಿ ಈ ಬಾರಿ ಮಾರುಕಟ್ಟೆ ಜನರಿಂದ ತುಂಬಿತ್ತು. ಕಾಲಿಡಲಾಗದ ಮಟ್ಟಿಗೆ ಮಾರುಕಟ್ಟೆ ಫುಲ್ ರಾಷ್ ಆಗಿತ್ತು.ಮಾರುಕಟ್ಟೆಗಳಲ್ಲಿ ವ್ಯಾಪಾರ-ವಹಿವಾಟಂತೂ ಜೋರಾಗಿತ್ತು.ಇನ್ನು ಹಬ್ಬಕ್ಕೆ ಬೇಕಾದ  ಹೂ, ಹಣ್ಣು, ಮಾವಿನ ಎಲೆ, ಬೇವಿನ ಎಲೆ, ತುಳಸಿ ಸೇರಿದಂತೆ ಹಲವಾರು ವಸ್ತುಗಳ ಬೆಲೆ ಗಗನಕ್ಕೇರಿದ್ದು ಗ್ರಾಹಕರು  ಕೊಳ್ಳುವುದಕ್ಕೆ ಮುಗಿಬಿದ್ದಿದ್ರು.
ಇನ್ನು ಯಾವ್ಯಾವ ಹೂಗಳು ಎಷ್ಟು ಬೆಲೆ ಇದೆ ಅಂತಾ ನೋಡುವುದಾದ್ರೆ 
ಕನಂಕಬರ     1 ಕೆಜಿ 600ರೂ 1 ಮಾರು 100 ರೂಪಾಯಿ
 
ಮಲ್ಲಿಗೆ          1 ಕೆ.ಜಿಗೆ 800 1 ಮಾರು 120 ರೂಪಾಯಿ
 
ಸೇವಂತಿಗೆ      1 ಕೆ.ಜಿಗೆ 800 ,1 ಮಾರು 120 ರೂಪಾಯಿ
 
ಕೆಂಪು ಗಲಾಬಿ  1 ಕೆ.ಜಿ 120 , 1 ಮಾರು 30 ರೂಪಾಯಿ
 
ಚೆಂಡು ಹೂ      1 ಕೆಜಿ 40 ರೂಪಾಯಿ

ಇನ್ನು ಹಣ್ಣುಗಳ ಬೆಲೆ ಕೂಡ ಗಗನಕ್ಕೇರಿದ್ದು ಹಣ್ಣುಗಳ ಬೆಲೆ ಹೀಗಿದೆ
ಹಣ್ಣುಗಳ ದರ ( 1 ಕೆಜಿಗೆ) 
 
 ಸೇಬು 1 ಕೆಜಿ 150
 
 ದಾಳಿಂಬೆ 1 ಕೆಜಿ 150
 
 ಕಿತ್ತಳೆಹಣ್ಣು 1 ಕೆಜಿ 140
 
 ಸಪೋಟ 1 ಕೆಜಿ‌ 80
 
 ದ್ರಾಕ್ಷಿ 1 ಕೆ.ಜಿ 80
 
 ಬಾಳೆಹಣ್ಣು 30 ರಿಂದ‌140 ರೂಪಾಯಿ

ಇನ್ನು ಮಾವಿನ ಎಲೆ, ಬೇವಿನ ಎಲೆ 20 ರೂಪಾಯಿಯಿಂದ 30 ರೂಪಾಯಿ, ತುಳಸಿ ಕೂಡ 30 ರಿಂದ 40 ರೂಪಾಯಿಯಾಗಿದೆ. ನಾಳೆ ಇರುವ ಹಬ್ಬಕ್ಕೆ ಜನರ ಖರೀದಿ ಭರಾಟೆ ಜೋರಾಗಿತ್ತು. ಬೆಲೆ ಕೈಗೆಟುಕದಂತಿದ್ರೂ, ವರ್ಷಕೊಂದು ಬಾರಿ ಬರೋ ಹಬ್ಬವಾದರಿಂದ ಬೆಲೆ ಹೆಚ್ಚಾದ್ರೂ ಸಂಪ್ರದಾಯ ಬಿಡೋ ಹಾಗಿಲ್ಲ ಅಂತಾ ಗ್ರಾಹಕರು ಕೊಂಡುಕೊಳ್ತಿದ್ರು..ಬೆಲೆ ಏರಿಕೆಯ ನಡುವೆಯೂ ಜನರು ತಮ್ಮಗೆ ಬೇಕಾದದನ್ನ ಕೊಂಡುಕೊಳ್ತಿದ್ರು. ಆದ್ರೆ ಹೆಚ್ಚಾಗಿರುವ ಬೆಲೆಗಳಿಂದ ಜನರಂತೂ ಕಂಗಾಲಾಗಿದ್ರು.ನಾಳೆಯ ಯುಗಾದಿ ಹಬ್ಬಕ್ಕೆ ಸಿಲಿಕಾನ್ ಸಿಟಿ ಮಂದಿ ಸಜ್ಜಾಗಿದ್ದು, ಸಕಲ ಸಿದ್ಧತೆಯನ್ನೂ ಮಾಡಿಕೊಂಡಿದ್ದಾರೆ. ಹಬ್ಬವನ್ನ ಆಚರಿಸಲೆಂದು ದುಬಾರಿಯಾಗಿದ್ರು ಹಬ್ಬಕ್ಕೆ ಬೇಕಾದದನ್ನೇಲ್ಲಾ ಕೊಂಡು ನಾಳೆ ಬೇವು-ಬೆಲ್ಲವನ್ನ ಸವಿಯುತ್ತಾ ಹಬ್ಬಕ್ಕೆ ಮತ್ತಷ್ಟು ಮೆರಗು ತರಲಿದ್ದಾರೆ.
 
 

Share this Story:

Follow Webdunia kannada

ಮುಂದಿನ ಸುದ್ದಿ

ಶಿಕ್ಷಣ ಇಲಾಖೆಗೆ ತಲೆನೋವಾದ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳ ಗೈರುಹಾಜರಿ