ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯಲ್ಲಿ ಮನೆ ಕಟ್ಟುವವರಿಗೆ ಹೊಸ ನಿಯಮ ಜಾರಿಗೆ ಬಂದಿದ್ದು, ಪ್ಲಾನ್ ಪ್ರಕಾರ ಮನೆ ಕಟ್ಟದಿದ್ದವರಿಗೆ ಬಾರೀ ಹೊಡೆತ ಬೀಳುತ್ತೆ ಎನ್ನಲಾಗಿದೆ.
ಮನೆ ನಿರ್ಮಿಸುವುದಕ್ಕೂ ಮುನ್ನ ಬಿಬಿಎಂಪಿ ಜೊತೆ ಒಪ್ಪಂದ ಮಾಡಿಕೊಂಡಿರಬೇಕು. ಪ್ಲಾನ್ ನಂತೆ ಮನೆ ಕಟ್ಟದಿದ್ದರೆ ಶೇ.10ರಷ್ಟು ಜಾಗ ಬಿಬಿಎಂಪಿ ಯ ಪಾಲಾಗುವುದು. ಹಾಗೇ ಅಪಾರ್ಟ್ ಮೆಂಟ್, ಮನೆಗಳಾದರೆ ಶೇಕಡಾ 5 ರಷ್ಟು ಜಾಗ ,ಕಟ್ಟಡ ನಿರ್ಮಿತ ಪ್ರದೇಶದ ಶೇ.10ರಷ್ಟು ಜಾಗ ಬಿಬಿಎಂಪಿ ಪಾಲಾಗಲಿದೆ ಎನ್ನಲಾಗಿದೆ. ಒಂದು ವೇಳೆ ಬಿಬಿಎಂಪಿ ಪ್ಲಾನ್ ಉಲ್ಲಂಘನೆಯಾದರೆ ಮನೆ ವಶಕ್ಕೆ ಪಡೆದು ಮನೆ ಸಂಪೂರ್ಣ ಧ್ವಂಸಕ್ಕೂ ಹೊಸ ಕಾನೂನಿನಲ್ಲಿ ಅವಕಾಶವಿದೆ. ಅಲ್ಲದೇ ಅಕ್ರಮವಾಗಿ ನಿರ್ಮಿಸಿ ಮಾರಾಟ ಮಾಡಿದ್ರೆ ಸಂಪೂರ್ಣ ವಶಕ್ಕೆ ಪಡೆಯಲಾಗುವುದು.
ಸ್ವಾಧೀನ ಪತ್ರ(ಓಸಿ) ಇಲ್ಲದಿದ್ರೆ ನೀರು, ವಿದ್ಯುತ್ ಸಿಗುವುದಿಲ್ಲ.ಹಾಗೇ ಪ್ಲಾನ್ ಮಂಜೂರಾದ 2 ವರ್ಷದಲ್ಲಿ ಮನೆ ಕಟ್ಟಲೇಬೇಕು, ಹೊಸದಾಗಿ ನಿರ್ಮಿಸುವ 108 ಚ.ಮೀ,ವಿಸ್ತೀರ್ಣಕ್ಕಿಂತ ಹೆಚ್ಚಿನ ಮನೆಗಳಿಗೆ ಮಳೆಕೊಯ್ಲು ಕಡ್ಡಾಯ. ಕಟ್ಟಡ ನಿರ್ಮಾಣ ಮಾಡಲು ಅನುಮತಿಗೆ 20 ದಾಖಲೆಗಳು, 12 ಇಲಾಖೆಗಳ ಅನುಮತಿ ಪಡೆಯುವುದು ಕಡ್ಡಾಯ. ಈ ಹೊಸ ರೂಲ್ಸ್ ನ್ನು ಇಂದಿನ ಕೌನ್ಸಿಲ್ ಸಭೆಯಲ್ಲಿ ಮಂಡನೆ ಮಾಡಲಿದ್ದು, ಕೌನ್ಸಿಲ್ ಸಭೆಯಲ್ಲಿ ಅನುಮೋದನೆ ಆಗುತ್ತಿದ್ದಂತೆ ಈ ನಿಯಮ ಜಾರಿಗೆ ಬರಲಿದೆ ಎನ್ನಲಾಗಿದೆ.