ಅಮವಾಸ್ಯೆ ಎಂದರೆ ಕೊರೊನಾ ವೈರಸ್ ಹೆದರುತ್ತಾ? ಅರೇ ಇದೆಂಥ ಪ್ರಶ್ನೆ. ಆಸ್ಪತ್ರೆಯಲ್ಲಿದ್ದು ವಾರಗಟ್ಟಲೇ ಟ್ರೀಟ್ ಮೆಂಟ್ ಪಡೆದರೂ ವಾಸಿಯಾಗದ ರೋಗ ಇದು ಅನ್ನೋದು ಜಗತ್ತಿಗೆ ಗೊತ್ತು. ಆದರೆ ಈ ಊರಿನವರದ್ದು ಮಾತ್ರ ಸ್ಪೇಷಲ್.
ದೇಶಾದ್ಯಂತ ಲಾಕ್ ಡೌನ್, ಸೀಲ್ ಡೌನ್ ಜಾರಿಯಲ್ಲಿದ್ದರೂ ಅದ್ಯಾವುದನ್ನೂ ಲೆಕ್ಕಿಸದೇ ನೂರಾರು ಜನರು ಮಾರುಕಟ್ಟೆಗೆ ಬೆಳ್ಳಂಬೆಳಗ್ಗೆ ಬಂದಿದ್ದರು.
ಲಾಕ್ ಡೌನ್ ಮರೆತು, ಸಾಮಾಜಿಕ ಅಂತರಕ್ಕೆ ಗೋಲಿ ಹೊಡೆದು, ತಮಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡಿ ಕೊರೊನಾ ವೈರಸ್ ಭಯವಿಲ್ಲದಂತೆ ನಡೆದುಕೊಂಡರು.
ಗದಗ ನಗರದ ಮಾರುಕಟ್ಟೆ ಸೇರಿದಂತೆ ಲಕ್ಷ್ಮೇಶ್ವರ ನಗರದ ಮಾರುಕಟ್ಟೆಯಲ್ಲಿಯೂ ಜನವೋ ಜನರಿದ್ದರು.
ಪೊಲೀಸರಿಗಂತೂ ಜನರಿಗೆ ತಿಳಿಹೇಳಿ ಮನೆಗೆ ಕಳಿಸುವುದೇ ದೊಡ್ಡ ತಲೆನೋವಾದಂತಿತ್ತು.