ರಾಜ್ಯ ಸರಕಾರದ ವಿರುದ್ಧ ಮಾಜಿ ಸಚಿವ ಜಾರಕಿಹೊಳಿ ಫುಲ್ ಗರಂ ಆಗಿದ್ದಾರೆ.
ಪ್ರವಾಹ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಸರ್ಕಾರ ಗಮನ ಸೆಳೆಯಲು ಬೆಳಗಾವಿಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು, ನಿರಾಶ್ರಿತರ ಜತೆಗೂಡಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಮಾಜಿ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿ, ರಾಜ್ಯ ಸರಕಾರ ಸಂತ್ರಸ್ತರಿಗೆ ಕೇವಲ 10 ಸಾವಿರ ಕೊಟ್ಟು ಕೈಕಟ್ಟಿ ಕುಳಿತಿದೆ. ಬಾಡಿಗೆ, ಶೆಡ್ ನಿರ್ಮಾಣ ಮತ್ತು ಮನೆ ನಿರ್ಮಾಣಗಳಿಗೆ 5 ಲಕ್ಷ ಘೋಷಣೆಯ ಭರವಸೆ ಹುಸಿಯಾದಂತಿದೆ. ಇದರ ಬಗ್ಗೆ ಇನ್ನೂವರೆಗೂ ಯಾವುದೇ ಕ್ರಮ ಕೈಗೆತ್ತಿಕೊಂಡಿಲ್ಲ. ಇನ್ನು ಬೆಳೆ ಹಾನಿಗೆ ಅಲ್ಪ ಪರಿಹಾರ ಘೋಷಿಸಿದ್ದಾರೆ. ಆದರೆ ಸಮೀಕ್ಷೆಯೇ ನಡೆದಿಲ್ಲ.
ಈ ಸರ್ಕಾರ ಜನರ ಪರ ನಿಲ್ಲುವ ಬಗ್ಗೆ ನಮಗೆ ಅನುಮಾನವಿದೆ ಎಂದ್ರು. ಕಳೆದ ಬಾರಿಯೂ ಬಿಜೆಪಿ ಸರಕಾರವಿದ್ದಾಗ ಕೇಂದ್ರದ ಗಮನ ಸೆಳೆಯುವಲ್ಲಿ ಸಂಸದರು ವಿಫಲರಾಗಿದ್ದರು. ಈ ಬಾರಿ 26 ಜನ ಸಂಸದರಿದ್ದರೂ ಕೇಂದ್ರ ಸರ್ಕಾರ ಮೇಲೆ ಒತ್ತಡ ಹೇರುವಲ್ಲಿ ವಿಫಲರಾಗಿದ್ದಾರೆ.
ರಾಜ್ಯದಲ್ಲಿ- ಕೇಂದ್ರದಲ್ಲಿ ಒಂದೇ ಸರ್ಕಾರವಿದ್ದರೆ ಅಭಿವೃದ್ಧಿ ಯಾಗುತ್ತದೆ ಎನ್ನುವುದು ಎಲ್ಲರ ಭ್ರಮೆಯಿತ್ತು. ಇದೀಗ ಅದು ಹುಸಿಯಾಗಿದೆ. ಇದೀಗ ಸರಕಾರ ಗಮನ ಸೆಳೆಯಲು ಕಾಂಗ್ರೆಸ್ ಪಕ್ಷ ಮುಂದಾಗಲಿದ್ದು ಪ್ರತಿಭಟನೆ ಮಾಡಲಿದ್ದೇವೆ ಎಂದ್ರು.