ಬೆಂಗಳೂರು: ಕೊರೋನಾ ಎದುರಿಸಲು ಸಹಾಯವಾಗಲು ಮತ್ತೆ ಎರಡು ವಾರಗಳ ಲಾಕ್ ಡೌನ್ ಮಾಡಿರುವ ರಾಜ್ಯ ಸರ್ಕಾರದ ವಿರುದ್ಧ ನೆಟ್ಟಿಗರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲಾಕ್ ಡೌನ್ ನಿಂದ ರಾಜಕಾರಣಿಗಳು, ಆಸ್ಪತ್ರೆಯವರು ದುಡ್ಡು ಮಾಡುತ್ತಾರೆ. ಉಳಿದವರ ಗತಿಯೇನು? ಕೃಷಿಕರು, ಕಾರ್ಮಿಕರಿಗೆ ಏನು ಪರಿಹಾರ ಕೊಡುತ್ತೀರಿ? ಎಂದು ಹಲವರು ಪ್ರಶ್ನಿಸಿದ್ದಾರೆ.
ಇನ್ನು, ತಯಾರಿ ಮಾಡಿಕೊಳ್ಳಲು ಲಾಕ್ ಡೌನ್ ಮಾಡುವುದು ಅನಿವಾರ್ಯ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿಕೆ ನೀಡಿದ್ದಕ್ಕೆ, ಹಾಗಿದ್ದರೆ ಕಳೆದ ಬಾರಿ ಲಾಕ್ ಡೌನ್ ಮಾಡಿದ್ದಾಗ ಏನೂ ತಯಾರಿ ಮಾಡಿರಲಿಲ್ಲವೇಕೆ? ಇಷ್ಟು ದಿನ ಟ್ರಯಲ್ ಮಾಡುತ್ತಾ ಕೂತಿದ್ದು ಯಾಕೆ? ಬಡಜನರ ಹೊಟ್ಟೆಪಾಡಿನ ಜೊತೆ ಆಟವಾಡಿದ್ದೇಕೆ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.