ಬಿಜೆಪಿಯು ಈ ಅಮೃತ ಮಹೋತ್ಸವಕ್ಕೆ ಹರ್ ಘರ್ ತಿರಂಗಾ ಎಂಬ ಹೆಸರಿನಲ್ಲಿ ಹೊಸ ಕಾರ್ಯಕ್ರಮಕ್ಕೆ ನಾಂದಿ ಹಾಡಿದೆ. ಈ ಕಾರ್ಯಕ್ರಮದ ಮೂಲಕ ಪ್ರತಿಯೊಬ್ಬರ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಿಸುವಂತೆ ಮನವಿ ಮಾಡಿದ್ದು, ಇದಕ್ಕೆ ಕಾಂಗ್ರೆಸ್ನವರು ಹಲವು ರೀತಿಯಲ್ಲಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹರ್ ಘರ್ ತಿರಂಗಾ ಹೆಸರಲ್ಲಿ ನಮ್ಮ ನಾಯಕರ ಹೋರಾಟ ಮರೆಮಾಚುತ್ತಿದ್ದಾರೆಂಬ ಡಿಕೆಶಿ ಹೇಳಿಕೆಗೆ ಕೆ.ಎಸ್. ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ. ನೆಹರು ಅವರು ಈ ದೇಶವನ್ನು ಮೂರು ಭಾಗ ಮಾಡಿದರು, ಅವರ ಹೆಸರು ಹೇಳಿಕೊಂಡು ಬೇಕಾದರೆ ಕಾಂಗ್ರೆಸ್ ಕಾರ್ಯಕ್ರಮ ಮಾಡಲಿ. ಯಾರದ್ದೋ ಕೆಟ್ಟ ಹೆಸರು ಹೇಳಿಕೊಂಡು ನಾವು ಹೋಗಲ್ಲ. ತಿಹಾರ್ ಜೈಲಿನಲ್ಲಿದ್ದ ಡಿಕೆಶಿ , ಅಗ್ರಹಾರ ಜೈಲಿನಲ್ಲಿದ್ದ ನಲಪಾಡ್ ಇವರ ನಾಯಕ. ಇಂಥವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದು ಹೇಳಿದರು.