ಕಾಂಗ್ರೆಸ್, ಬಿಜೆಪಿಗೆಪ್ರತಿಷ್ಠೆಯಕಣವಾಗಿರುವಗುಂಡ್ಲುಪೇಟೆಮತ್ತುನಂಜನಗೂಡುಉಪಚುನವಣಾ ಕ್ಷೇತ್ರಗಳಲ್ಲಿಮತದಾನನಡೆಯುತ್ತಿದೆ. ಬೆಳಗ್ಗೆ 7ಗಂಟೆಯಿಂದಲೇ ಮತದಾನ ಆರಂಭವಾಗಿದೆ. ಎಲ್ಲೆ. ಡೆ ಪೊಲೀಸ್ ಸರ್ಪಗಾವಲು ಹಾಕಲಾಗಿದೆ
ಶ್ರೀನಿವಾಸಪ್ರಸಾದ್ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರಿಂದ ನಂಜನಗೂಡಿನಲ್ಲಿ ಮತ್ತು ಮಾಜಿ ಸಚಿವ ಎಚ್.ಎಸ್. ಮಹದೇವಪ್ರಸಾದ್ ನಿಧನದಿಂದ ತೆರವಾದ ಗುಂಡ್ಲುಪೇಟೆ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುತ್ತಿದೆ.
ನಂಜನಗೂಡು ಕ್ಷೇತ್ರದಲ್ಲಿ ಬಿಜೆಪಿಯಿಂದ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಮತ್ತು ಕಾಂಗ್ರೆಸ್`ನಿಂದ ಕಳಲೆ ಕೃಷ್ಣಮೂರ್ತಿ ಕಣದಲ್ಲಿದ್ದಾರೆ.
ಇತ್ತ, ಗುಂಡ್ಲುಪೇಟೆಯಲ್ಲಿ ಮಹದೇವ ಪ್ರಸಾದ್ ಪತ್ನಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹದೇವಪ್ರಸಾದ್ ಮತ್ತು ಬಿಜೆಪಿಯ ನಿರಂಜನ್ ಕುಮಾರ್ ನಡುವೆ ನೇರ ಹಣಾಹಣಿ ಇದೆ. ರಿಪಬ್ಲಿಕನ್ ಪಾರ್ಟಿಯ ಎಂ. ಶಿವರಾಜು, ಭಾರತೀಯ ಡಾ.ಬಿ.ಆರ್. ಅಂಬೇಡ್ಕರ್ ಜನತಾ ಪಾರ್ಟಿಯ ಎಂ. ಹೊನ್ನಾರಯ್ಯ, ಪಕ್ಷೇತರರಾದ ಕೆ ಸೋಮಶೇಖರ್, ಬಿ. ಮಹದೇವ ಪ್ರಸಾದ್ ಮತ್ತು ಎಂ. ಶಿವರಾಮು ಕಣದಲ್ಲಿದ್ದಾರೆ.
ಸಚಿವ ಸ್ಥಾನದಿಂದ ಕೈಬಿಟ್ಟ ಅಸ್ತ್ರವನ್ನ ಅನುಕಂಪದ ಅಲೆಯಾಗಿ ಬಳಸಿಕೊಂಡು ಗೆಲುವಿನ ಪತಾಕೆ ಹಾರಿಸಲು ನಂಜನಗೂಡಿನಲ್ಲಿ ಶ್ರೀನಿವಾಸ್ ಪ್ರಸಾದ್ ಮುಂದಾಗಿದ್ದಾರೆ. ಇದು ಸಿದ್ದರಾಮಯ್ಯ ಮತ್ತು ಶ್ರೀನಿವಾಸಪ್ರಸಾದ್ ನಡುವಿನ ಹೋರಾಟ ಎಂದೇ ಬಿಂಬಿಸಲಾಗಿದೆ. ಇತ್ತ, ಗುಂಡ್ಲುಪೇಟೆಯಲ್ಲಿ ಗೀತಾ ಮಹದೇವಪ್ರಸಾದ್`ಗೆ ಅನುಕಂಪದ ಅಲೆ ವರ್ಕೌಟ್ ಆಗುವ ನಿರೀಕ್ಷೆಯಲ್ಲಿ ಕಾಂಗ್ರೆಸ್ ಪಕ್ಷವಿದೆ. ಏಪ್ರಿಲ್ 13ಕ್ಕೆ ಫಲಿತಾಂಶ ಹೊರಬೀಳಲಿದೆ.