ಪೆಟ್ರೋಲ್ ಬೆಲೆ ಇಳಿಕೆ ಖುಷಿಯಲ್ಲಿರುವ ರಾಜ್ಯದ ಜನರಿಗೆ ಹಾಲಿನ ದರ ಏರಿಕೆಯ ಬಿಸಿ ತಟ್ಟುತ್ತಿದೆ. ಇಂದಿರನಿಂದಲೇ ನಂದಿ ಹಾಲು ಮತ್ತು ಮೊಸರಿನ ದರ ಪ್ರತೀ ಲೀಟರ್`ಗೆ 2 ರೂ. ಏರಿಕೆಯಾಗುತ್ತಿದೆ. ಕೆಎಂಎಫ್ ಸಭೆಯಲ್ಲಿ ಹಾಲಿನ ದರ ೇರಿಕೆಗೆ 2 ದಿನಗಳ ಹಿಂದೆಯೇ ನಿರ್ಧರಿಸಲಾಗಿತ್ತು.
ಹೈನುಗಾರಿಕೆಗೆ ರೈತರು ಬಳಸುವ ಪಶು ಆಹಾರ ಸೇರಿದಂತೆ ಕಚ್ಚಾ ವಸ್ತುಗಳ ಬೆಲೆ ಏರಿಕೆ ಮತ್ತು ಬರಗಾಲದಿಂದ ತತ್ತರಿಸಿರುವ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ದರ ಏರಿಕೆ ಮಾಡಲಾಗಿದೆ. 2 ರೂ. ಏರಿಕೆಯಲ್ಲಿ ರೈತರಿಗೆ 1.50 ರೂ. ಮತ್ತು ಒಕ್ಕೂಟಗಳಿಗೆ 50 ಪೈಸೆ ಸಿಗಲಿದೆ.
ಪರಿಷ್ಕೃತ ದರ ಇಂದಿನಿಂದಲೇ ಜಾರಿಗೆ ಬಂದಿದ್ದು, ಸಾಮಾನ್ಯ ಹಾಲಿನ ದರ 33 ರೂ. ನಿಂದ 35 ರೂಪಾಯಿಗೆ, ಹಸಿರು ಪ್ಯಾಕೆಟ್ 36ರಿಂದ 38 ರೂ. ಗೆ ಮತ್ತು ಕೇಸರಿ ಪ್ಯಾಕೆಟ್ 38 ರಿಂದ 40 ರೂ.ಗೆ ಏರಿಕೆಯಾಗಿದೆ. ಮೊಸರಿನ ದರ 40ರಿಂದ 42 ರೂಪಾಯಿಗೆ ಏರಿಕೆ ಕಂಡಿದೆ.