Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಲಾಕ್ ಡೌನ್ ಉಲ್ಲಂಘಿಸಿ ನಮಾಜ್ : ಮಸೀದಿಯಲ್ಲಿದ್ದ 15 ಜನರ ಬಂಧನ

ಲಾಕ್ ಡೌನ್ ಉಲ್ಲಂಘಿಸಿ ನಮಾಜ್ : ಮಸೀದಿಯಲ್ಲಿದ್ದ 15 ಜನರ ಬಂಧನ
ಕಲಬುರಗಿ , ಬುಧವಾರ, 29 ಏಪ್ರಿಲ್ 2020 (14:32 IST)
ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿ ಮಸೀದಿಯೊಂದರಲ್ಲಿ ನಮಾಜ್ ಸಲ್ಲಿಸುತ್ತಿದ್ದ 15 ಜನರನ್ನು ಬಂಧನ ಮಾಡಲಾಗಿದೆ.
 

ಸರಕಾರದ ನಿಯಮ ಉಲ್ಲಂಘನೆ ಮಾಡಿದ್ದಲ್ಲದೇ ಸಾಮೂಹಿಕವಾಗಿ ಪ್ರಾರ್ಥನೆ ಮಾಡುತ್ತಿದ್ದ ಮಸೀದಿಯಲ್ಲಿದ್ದ ಜನರಿಗೆ ಪೊಲೀಸರು ಸಖತ್ತಾಗಿ ಲಾಠಿ ರುಚಿ ತೋರಿಸಿ ಬಂಧಿಸಿದ್ದಾರೆ ಎನ್ನಲಾಗಿದೆ.

ರೆಡ್ ಝೋನ್ ನಲ್ಲಿರುವ ಕಲಬುರಗಿ  ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಸೇಡಂ ತಾಲೂಕಿನ ಬೊಮ್ಮನಹಳ್ಳಿ ಮಸೀದಿಯಲ್ಲಿ ಬಂಧಿತರು ಪ್ರಾರ್ಥನೆ ಸಲ್ಲಿಸುತ್ತಿದ್ದರು. ಸೇಡಂ ಠಾಣೆಯಲ್ಲಿ ಈ ಕುರಿತು ಕೇಸ್ ದಾಖಲಾಗಿದೆ.

ಕಲಬುರಗಿಯಲ್ಲಿ ಕೊರೊನಾ ವೈರಸ್ ಗೆ ಈ ವರಗೆ 5 ಜನರು ಸಾವನ್ನಪ್ಪಿದ್ದರೆ, 52 ಪಾಸಿಟಿವ್ ಕೇಸ್ ಗಳಿವೆ. ರೆಡ್ ಝೋನ್ ನಲ್ಲಿದ್ದರೂ ಲಾಕ್ ಡೌನ್ ಪಾಲಿಸದೇ ನಮಾಜ್ ಮಾಡಿರೋದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗುತ್ತಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಒಂದೇ ದಿನ 8 ಹೊಸ ಕೊರೊನಾ ಕೇಸ್ : ಬೆಚ್ಚಿ ಬಿದ್ದ ಕಲಬುರಗಿ