ವಿದ್ಯಾರ್ಥಿಗಳನ್ನು ಸಂಘಟನೆಯತ್ತ ಸೆಳೆಯುವ ಯತ್ನ ನಡೆಸಿರುವ ಇಸ್ಲಾಮಿಕ್ ಸಂಘಟನೆಯ ಕರಿ ನೆರಳು ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾಲಯದ ಮೇಲೆ ಬಿದ್ದಿರುವುದು ಆತಂಕದ ಸಂಗತಿಯಾಗಿದೆ.
ಮೈಸೂರು ವಿಶ್ವವಿದ್ಯಾಲಯದ ವೆಬ್‌ಸೈಟ್ ಹ್ಯಾಕ್ ಮಾಡಿರುವ ಇಸ್ಲಾಮಿಕ್ ಸಂಘಟನೆ, ಇಸ್ಲಾಂ ಒಂದೇ ಧರ್ಮ, ಬರ್ಮಾ ಮುಸ್ಲಿಂರನ್ನು ರಕ್ಷಿಸಿ. ಬೌದ್ಧ ಉಗ್ರತ್ವವನ್ನು ನಿಲ್ಲಿಸಿ ಎಂದು ಸಂದೇಶ ಹಾಕಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ರಾಜ್ಯ ಗೃಹ ಖಾತೆ ಸಚಿವ ಡಾ.ಜಿ.ಪರಮೇಶ್ವರ್, ಮೈಸೂರು ವಿಶ್ವವಿದ್ಯಾಲಯದ ವೆಬ್‌ಸೈಟ್ ಹ್ಯಾಕ್ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಬರ್ ಕ್ರೈಂ ವಿಭಾಗದ ಪೊಲೀಸ್ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ. ಯಾವ ಸಂಘಟನೆ, ಯಾವ ಉದ್ದೇಶಕ್ಕಾಗಿ ವಿವಿ ವೆಬ್‌ಸೈಟ್ ಹ್ಯಾಕ್ ಮಾಡಿದ್ದಾರೆ ಎಂದು ಸೈಬರ್ ಕ್ರೈಂ ವಿಭಾಗದ ಪೊಲೀಸ್ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ತಿಳಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ