ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಸ್ಪರ್ಧಿಸುವುದೇ ನನ್ನ ಆಸೆಯಾಗಿದೆ ಎಂದು ಬಿಜೆಪಿ ನಾಯಕಿ ಮಾಜಿ ಸಂಸದೆ ತೇಜಸ್ವಿನಿ ರಮೇಶ್ ಹೇಳಿದ್ದಾರೆ.
ಚುನಾವಣೆಯಲ್ಲಿ ತಂದೆ( ದೇವೇಗೌಡ) ಮತ್ತು ಮಗನ(ಕುಮಾರಸ್ವಾಮಿ) ವಿರುದ್ಧ ಸ್ಪರ್ಧಿಸಿದವಳು ನಾನು. ಬಿಜೆಪಿ ನಾಯಕತ್ವ ಅವಕಾಶ ನೀಡಿದಲ್ಲಿ ಚುನಾವಣೆಗೆ ನಿಲ್ಲಲು ಸಿದ್ದ ಎಂದು ಘೋಷಿಸಿದರು.
ಆದಾಗ್ಯೂ ಬಿಜೆಪಿ ಪಕ್ಷದ ವರಿಷ್ಠರ ತೀರ್ಮಾನಕ್ಕೆ ಬದ್ಧಳಾಗಿದ್ದೇನೆ. ವರಿಷ್ಠರು ಯಾವ ರೀತಿ ತೀರ್ಮಾನ ತೆಗೆದುಕೊಳ್ಳುತ್ತಾರೋ ಅದರಂತೆ ನಡೆಯುತ್ತೇನೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿದ್ದ ತೇಜಸ್ವಿನಿ ರಮೇಶ್ ನಂತರ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಇದೀಗ ರಾಮನಗರದಿಂದ ಚುನಾವಣೆ ಕಣಕ್ಕಿಳಿಯಲು ರಣತಂತ್ರ ರೂಪಿಸುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.