Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದ ಮುಸ್ಲಿಂ ಮಹಿಳೆಯರು

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದ ಮುಸ್ಲಿಂ ಮಹಿಳೆಯರು
ಹುಬ್ಬಳ್ಳಿ , ಶುಕ್ರವಾರ, 3 ಜನವರಿ 2020 (19:13 IST)
ಕೇಂದ್ರ ಸರಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಗೆ ಕೆಲವು ಮುಸ್ಲಿಂ ಮಹಿಳೆಯರು ವಿರೋಧಿಸಿದ್ದಾರೆ.

ಕೇಂದ್ರದ ಕ್ರಮ ವಿರೋಧಿಸಿ ಉಡಾನ್ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಕುಮಾರಿ ಬತುಲ್ ಕಿಲ್ಲೆದಾರ್ ನೇತೃತ್ವದಲ್ಲಿ  ಹುಬ್ಬಳ್ಳಿ ತಹಸೀಲ್ದಾರ ಕಚೇರಿಯ ಎದುರು ಸಂಘಟನೆಯ ಕಾರ್ಯಕರ್ತರು  ಬೃಹತ್‌ ಪ್ರತಿಭಟನೆ ನಡೆಸಿದ್ರು.  

ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಇದೇ ವೇಳೆ ಎನ್ ಆರ್ ಸಿ , ಸಿಎಎ ಅಳಿಸಿ ದೇಶ ಉಳಿಸಿ ಎಂಬ  ನಾಮಫಲಕಗಳನ್ನು ಹಿಡಿದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ನಾಗರಿಕ ಮತ್ತು ರಾಜಕೀಯ ಜನಾಂಗೀಯ ತಾರತಮ್ಯದ ಕುರಿತಾದ ಭಾರತದ ಅಂತಾರಾಷ್ಟ್ರೀಯ ಒಪ್ಪಂದದಲ್ಲಿ ಪ್ರತಿಪಾದಿಸಲಾಗಿರುವ ಕಾನೂನಿನ ಮೊದಲು ಸಂವಿಧಾನ ಮತ್ತು ಭಾರತದ ಕಟ್ಟುಪಾಡುಗಳು ಮತ್ತು ಜನಾಂಗೀಯ ಅಥವಾ ಧಾರ್ಮಿಕ ಆಧಾರದ ಮೇಲೆ ತಾರತಮ್ಯವನ್ನು ಭಾರತೀಯ ಜನತಾ ಪಕ್ಷ ಮಾಡುತ್ತಿದೆ. ಪೌರತ್ವ ಕಾಯ್ದೆ ಭಾರತೀಯ ಸಂವಿಧಾನದ 14, 15, 21 ಮತ್ತು 25ನೇ ವಿಧಿಯನ್ನು ಉಲ್ಲಂಘಿಸಲಿದೆ ಎಂದು ದೂರಿದರು.

ಭಾರತದಲ್ಲಿ ಸಂವಿಧಾನದ ಜಾತ್ಯತೀತ ಉಳಿಸಲು ಮತ್ತು 2019ರ ಅಸಂವಿಧಾನಿಕ ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ರದ್ದುಪಡಿಸವಂತೆ ಆಗ್ರಹಿಸಿದರು.



Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್ ಗಾಂಧಿ ಸಲಿಂಗಕಾಮಿ ಎಂಬುದಕ್ಕೆ ದಾಖಲೆಯಿದೆ ಎಂದವರು ಯಾರು ಗೊತ್ತೇ?!