ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಮೌನವಾಗಿದ್ದಾರೆ ಎಂದು ವ್ಯಂಗ್ಯವಾಡಿದ್ದ ನಟ ಪ್ರಕಾಶ್ ರೈ ವಿರುದ್ಧ ಬಿಜೆಪಿ ಸಂಸದ ಪ್ರತಾಪ್ ಸಿಂಹ ಕಿಡಿ ಕಾರಿದ್ದಾರೆ.
ನೀವು ಒಬ್ಬ ನಟ ಎನ್ನುವ ವಿವೇಚನೆ ನಿಮಗಿರಲಿ. ಗೌರಿ ಹತ್ಯೆ ತನಿಖೆ ನಡೆಸುವುದು ರಾಜ್ಯದ ಕಾಂಗ್ರೆಸ್ ಸರ್ಕಾರ. ರಾಜ್ಯ ಸರ್ಕಾರವನ್ನು ಪ್ರಶ್ನಿಸುವುದು ಬಿಟ್ಟು, ಸಂಘ ಪರಿವಾರ, ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿಯನ್ನು ಈ ವಿಚಾರದಲ್ಲಿ ಎಳೆದು ತಂದರೆ ನಿಮಗೂ ಸೂಕ್ತ ವೇದಿಕೆಯಲ್ಲೇ ಪ್ರತ್ಯುತ್ತರ ನೀಡಬೇಕಾಗುತ್ತದೆ ಎಂದು ಪ್ರತಾಪ್ ಸಿಂಹ ಎಚ್ಚರಿಕೆ ನೀಡಿದ್ದಾರೆ.
ಕಾವೇರಿ ವಿವಾದದ ಬಗ್ಗೆ ಕೇಳಿದರೆ ನಾನೊಬ್ಬ ನಟ ಎಂದು ಉತ್ತರಿಸಲು ನಿರಾಕರಿಸುತ್ತೀರಿ. ತಮಿಳುನಾಡಿನಲ್ಲಿ ಪ್ರಕಾಶ್ ರಾಜ್ ಕರ್ನಾಟಕದಲ್ಲಿ ಪ್ರಕಾಶ್ ರೈ ಎಂದು ಕರೆಸಿಕೊಳ್ಳುತ್ತೀರಿ. ಈಗ ಗೌರಿ ಹತ್ಯೆ ಬಗ್ಗೆ ಅನಗತ್ಯವಾಗಿ ಪ್ರಧಾನಿ ಮೋದಿ ವಿರುದ್ಧ ಬೀದಿಯಲ್ಲಿ ಮಾತನಾಡಿದರೆ ನಿಮಗೂ ಅದೇ ರೀತಿ ಉತ್ತರಿಸಬೇಕಾಗುತ್ತದೆ ಎಂದು ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ