Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಗಳ ಆನ್ ಲೈನ್ ಶಿಕ್ಷಣ ವೆಚ್ಚ ಭರಿಸಲು ಮಾಂಗಲ್ಯ ಮಾರಿದ ತಾಯಿ

ಮಗಳ  ಆನ್ ಲೈನ್ ಶಿಕ್ಷಣ ವೆಚ್ಚ ಭರಿಸಲು ಮಾಂಗಲ್ಯ ಮಾರಿದ ತಾಯಿ
ಗದಗ , ಶನಿವಾರ, 1 ಆಗಸ್ಟ್ 2020 (11:53 IST)
ಗದಗ: ಕೊರೋನಾದಿಂದಾಗಿ ಈಗ ರಾಜ್ಯಾದ್ಯಂತ ಆನ್ ಲೈನ್ ಶಿಕ್ಷಣ ಶುರುವಾಗಿದೆ. ಸರ್ಕಾರಿ ಶಾಲೆಗಳೂ ಟಿವಿ ವಾಹಿನಿ ಮೂಲಕ ಆನ್ ಲೈನ್ ಶಿಕ್ಷಣ ಶುರು ಮಾಡಿಕೊಂಡಿದೆ.


ಆದರೆ ಕೆಲವರಿಗೆ ಇದು ದುಬಾರಿಯಾಗುತ್ತಿದೆ. ಗದಗದ ನರಗುಂದ ತಾಲೂಕಿನಲ್ಲಿ ಅಂತಹದ್ದೇ ಘಟನೆ ನಡೆದಿದೆ. ಮಗಳ ಆನ್ ಲೈನ್ ಶಿಕ್ಷಣಕ್ಕಾಗಿ ಟಿವಿ ಖರೀದಿಸಲು ತಾಯಿಯೊಬ್ಬಳು ತನ್ನ ಮಾಂಗಲ್ಯ ಸರವನ್ನೇ ಅಡವಿಟ್ಟ ಘಟನೆ ನಡೆದಿದೆ.

ವಿಷಯ ತಿಳಿದ ತಹಶೀಲ್ದಾರರು ಅಧಿಕಾರಿಗಳನ್ನು ಕಳುಹಿಸಿ ವಿವರಣೆ ಪಡೆದಿದ್ದಾರೆ. ಬಳಿಕ ಸಾಲ ನೀಡಿದಾತನಿಗೆ ಮನವರಿಕೆ ಮಾಡಿದ ಬಳಿಕ ಆತ ಮಾಂಗಲ್ಯ ಸರ ಮರಳಿಸಿದ್ದಾನೆ. ಇದಾದ ಬಳಿಕ ಸ್ಥಳೀಯರೇ ಹಣ ಒಗ್ಗೂಡಿಸಿ ಟಿವಿ ಖರೀದಿಸಲು ನೆರವಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ಗೆ ಔಷಧ ಕಂಡು ಹಿಡಿಯಲು ಪೈಪೋಟಿ ನಡೆಸುತ್ತಿರುವ ದೇಶಗಳು ಈಗಾಗಲೇ ಸಂಶೋಧನೆ ಮಾಡಿದ ಲಸಿಕೆ ಎಷ್ಟು ಗೊತ್ತಾ?