Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಗಣೇಶ ವಿಸರ್ಜನೆಗೆ ತೆರಳಿದ್ದ 12 ಕ್ಕೂ ಹೆಚ್ಚು ಜನರು ನದಿ ಪಾಲು

ಗಣೇಶ ವಿಸರ್ಜನೆಗೆ ತೆರಳಿದ್ದ 12 ಕ್ಕೂ ಹೆಚ್ಚು ಜನರು ನದಿ ಪಾಲು
ಶಿವಮೊಗ್ಗ: , ಬುಧವಾರ, 7 ಸೆಪ್ಟಂಬರ್ 2016 (18:27 IST)
ಗಣೇಶ ವಿಸರ್ಜನೆ ಸಂದರ್ಭದಲ್ಲಿ ದೋಣಿ ಮುಳುಗಿದ ಪರಿಣಾಮವಾಗಿ 12 ಕ್ಕೂ ಹೆಚ್ಚು ಜನರು ನೀರಿನಲ್ಲಿ ಕೊಚ್ಚಿ ಹೋದ ದಾರುಣ ಘಟನೆ ವರದಿಯಾಗಿದೆ. ನೀರಿನಲ್ಲಿ ಕೊಚ್ಚಿ ಹೋದವರು ಬದುಕುಳಿಯುವ ಸಾಧ್ಯತೆಗಳಿಲ್ಲ ಎಂದು ಮೂಲಗಳು ತಿಳಿಸಿವೆ. 
 
ಶಿವಮೊಗ್ಗ ಜಿಲ್ಲೆಯ ಹಾಡೋನಹಳ್ಳಿಯಲ್ಲಿನ ತುಂಗಭದ್ರ ನದಿಯಲ್ಲಿ ಗಣಪತಿ ಮೂರ್ತಿಯನ್ನು ವಿಸರ್ಜಿಸಲು 35 ಕ್ಕೂ ಹೆಚ್ಚಿನ ಜನ ತೆರಳಿದ್ದಾರೆ. ಮೊದಲಿಗೆ ಚಿಕ್ಕ ಮೂರ್ತಿಯನ್ನು ವಿಸರ್ಜಿಸಿದ ನಂತರ ದೊಡ್ಡ ಮೂರ್ತಿಯನ್ನು ವಿಸರ್ಜಿಸುವ ಸಂದರ್ಭದಲ್ಲಿ ದೋಣಿ ಮುಗುಚಿದ್ದರಿಂದ ನದಿಯ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಅದರಲ್ಲಿ ಕೆಲವರು ಈಜಿ ದಡ ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  
 
ಘಟನೆಯ ಬಗ್ಗೆ ಮಾಹಿತಿ ಪಡೆದ ಶಿವಮೊಗ್ಗ ಗ್ರಾಮಾಂತರ ಠಾಣೆಯ ಪೊಲೀಸರು, ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಆದರೆ, ನೀರಿನಲ್ಲಿ ಕೊಚ್ಚಿ ಹೋದವರ ಸುಳಿವು ದೊರೆತಿಲ್ಲ. ಮಂಜು, ಶಿವು, ವೀರಭದ್ರ ಎನ್ನುವವರ ಮೂವರ ಮೃತದೇಹಗಳು ಪತ್ತೆಯಾಗಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಜಯಲಲಿತಾ ತಮಿಳುನಾಡು ಮಾರಮ್ಮಳಂತೆ: ಮಂಡ್ಯ ರೈತರ ಆಕ್ರೋಶ