ಹುಬ್ಬಳ್ಳಿ : ವಿಧಾನಸೌಧದ ಬಳಿ ಹಣ ಸಿಕ್ಕ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪುಟ್ಟರಂಗ ಶೆಟ್ಟಿ ಪರವಾಗಿ ಗೃಹ ಸಚಿವ ಎಂ.ಬಿ.ಪಾಟೀಲ್ ಬ್ಯಾಟ್ ಬೀಸಿದ್ದಾರೆ.
ನಿನ್ನೆ ಸಚಿವ ಪುಟ್ಟರಂಗ ಶೆಟ್ಟಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ನೌಕರನಿಂದ 25.76 ಲಕ್ಷ ರೂ.ಗಳನ್ನು ವಿಧಾನಸೌಧ ಠಾಣೆ ಪೊಲೀಸರು ಜಪ್ತಿ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಎಂ.ಬಿ.ಪಾಟೀಲ್ ಅವರು ಸಚಿವ ಪುಟ್ಟರಂಗ ಶೆಟ್ಟಿ ಪರವಾಗಿ ನಿಂತಿದ್ದಾರೆ.
‘ಕಚೇರಿಯಲ್ಲಿ ಪಿಎ, ಡ್ರೈವರ್ ಸೇರಿ ಹಲವು ಸಿಬ್ಬಂದಿ ಇರುತ್ತಾರೆ. ಅವರೆಲ್ಲ ಈ ರೀತಿ ಮಾಡಿದರೆ ಸಚಿವರಿಗೇನು ಸಂಬಂಧ? ಈ ಬಗ್ಗೆ ಸಂಬಂಧಪಟ್ಟ ಸಚಿವರು ಹೇಳಿಕೆ ಕೊಡುತ್ತಾರೆ. ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.