ಕಾಂಗ್ರೆಸ್ ವಿರುದ್ದ ಹೋರಾಟ ಮಾಡುವುದಕ್ಕೆ ಮೈತ್ರಿ ಅನಿವಾರ್ಯತೆ ಇಲ್ಲ ಅವರಿಗೆ ಅವರ ಅಸ್ತಿತ್ವ ಕಾಪಾಡಿಕೊಳ್ಳಲು ಮೈತ್ರಿ ಮಾಡಿಕೊಂಡಿದ್ದಾರೆ.ಮೋದಿ ಪಾಪ್ಯುಲಾರಿಟಿ ಇಳಿತಾ ಇದೆ ಎನ್ನುವುದಕ್ಕೆ ಮೈತ್ರಿ ಸಾಕ್ಷಿ.ಮೋದಿಯವರ ಆಟ ನಡೆಯುತ್ತಿಲ್ಲ ಎಂದು ಪ್ರೀಯಾಂಕ ಖರ್ಗೆ ಟಾಂಗ್ ನೀಡಿದ್ದಾರೆ.
ಜೆಡಿಎಸ್ ನ ಬಿಟಿಂ ಬಿಜೆಪಿ ಎನ್ನೋದು ಸಾಬೀತಾಗಿದೆಮನೂರು ದಿನಗಳೇ ಕಳೆದರೂ ಇನ್ನೂ ವಿಪಕ್ಷ ನಾಯಕನಾಗಿಲ್ಲ.ರಾಜ್ಯ ಬಿಜೆಪಿ ಅಧ್ಯಕ್ಷರಿಗೇ ಪಕ್ಷದ ಮೇಲೆ ಹಿಡಿತ ಇಲ್ಲ.ಒಂದು ರಾಷ್ಟ್ರೀಯ ಪಕ್ಷ ಪ್ರಾದೇಶಿಕ ಪಕ್ಷದ ಬೀಟಿಂ ತರಹ ಕೆಲಸ ಮಾಡ್ತಾ ಇದೆ.ಪದೇ ಪದೇ ಕನ್ನಡಿಗರಿಗೆ ಅವಮಾನ ಬಿಜೆಪಿಯಿಂದ ಆಗ್ತಾ ಇದೆ.ಸದನ ನಡೆಯುವಾಗ ಯಾರು ಹೆಚ್ಚೆಚ್ಚು ಪ್ರಶ್ನೆ ಕೇಳಿದರು ಗೊತ್ತಿದೆ.ಬಿಜೆಪಿಯವರ ಮೊನೋ ಆ್ಯಕ್ಟಿಂಗ್ ದೆಹಲಿ ಲೀಡರ್ಸ್ ಯಾರೂ ಗಮನಿಸಿಲ್ಲ.ಕುಮಾರಸ್ವಾಮಿ ವಿಪಕ್ಷ ನಾಯಕನಾಗ್ತಾರಾ ಅಂತ ಬಿಜೆಪಿಯವರನ್ನೇ ಕೇಳಬೇಕು.ಕೇವಲ ಸೀಟ್ ಶೇರಿಂಗ್ ನಲ್ಲಿ ಮಾತ್ರಾನಾ ಅಥವಾ ವಿಧಾನಸಭೆ ಒಳಗೂ ಸೀಟು ಶೇರಿಂಗ್ ಆಗತ್ತಾ ನೋಡೋಣ ಎಂದು ಪ್ರೀಯಾಂಕ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಇನ್ನೂ ಬಿಕೆ ಹರಿ ಪ್ರಸಾದ್ ಅಸಮಾಧಾನ ವಿಚಾರವಾಗಿ ಬಿಕೆ ಹರಿ ಪ್ರಸಾದ್ ಎಲ್ಲಿಯೂ ಕೂಡ ಸಿದ್ದರಾಮಯ್ಯ ಹೆಸರು ಹೇಳಿಲ್ಲ.ಸಿಎಂ ಕೂಡ ಇದನ್ನು ಸ್ಪಷ್ಟಪಡಿಸಿದ್ದಾರೆ.ಹರಿಪ್ರಸಾದ್ ಗೆ ಎಐಸಿಸಿ ಎಲ್ಲ ನಾಯಕರೂ ಕೂಡ ಗೊತ್ತಿದ್ದಾರೆ.ಏನೇ ಇದ್ದರೂ ಅವರು ಮತ್ತು ನಾಯಕರು ಮಾತನಾಡಿಕೊಳ್ತಾರೆ.ಸಮಾಜದ ಪರ ಹೋರಾಟ ಮಾಡುವುದರಲ್ಲಿ ತಪ್ಪೇನಿಲ್ಲ.ಯಾವುದೇ ರೀತಿಯ ಗೊಂದಲಗಳಿಲ್ಲ.ಇರುವುದು ಕೆಲವೇ ಸ್ಥಾನಗಳು ಹೀಗಾಗಿ ಎಲ್ಲರಿಗೂ ಅವಕಾಶ ನೀಡಲು ಸಾಧ್ಯವಿಲ್ಲ.ಇರೋದು ಒಂದೇ ಸಿಎಂ ಸ್ಥಾನ ಎಂದು ಪ್ರೀಯಾಂಕ ಖರ್ಗೆ ಹೇಳಿದ್ದಾರೆ.