Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮೋದಿ ಸರಕಾರದಿಂದ ದ್ವೇಷದ ವಾತಾವರಣ ಸೃಷ್ಟಿ: ಯಚೂರಿ

ಮೋದಿ ಸರಕಾರದಿಂದ ದ್ವೇಷದ ವಾತಾವರಣ ಸೃಷ್ಟಿ: ಯಚೂರಿ
ನವದೆಹಲಿ , ಭಾನುವಾರ, 9 ಅಕ್ಟೋಬರ್ 2016 (11:43 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ಸರಕಾರ ಎರಡುವರೆ ವರ್ಷದ ಅವಧಿಯಲ್ಲಿ ದೇಶಾದ್ಯಂತ ದ್ವೇಷದ ವಾತಾವರಣ ಸೃಷ್ಟಿಸಿದೆ ಎಂದು ಸಿಪಿಐ(ಎಂ) ಮುಖಂಡ ಸೀತಾರಾಮ್ ಯಚೂರಿ ಆರೋಪಿಸಿದ್ದಾರೆ.
 
ಉತ್ತರಪ್ರದೇಶದಲ್ಲಿ ಗೋಮಾಂಸ ಸೇವನೆ ಕುರಿತಂತೆ ನಡೆದ ಹಿಂಸಾತ್ಮಕ ಘಟನೆಗಳು ರಾಮಲೀಲಾ ಕಾರ್ಯಕ್ರಮದಿಂದ ನಟ ನವಾಜುದ್ದೀನ್ ಸಿದ್ದಿಕಿಯನ್ನು ದೂರವಿಟ್ಟಿರುವುದು ಸೇರಿದಂತೆ ಅನೇಕ ಘಟನೆಗಳು ದ್ವೇಷದ ವಾತಾವರಣಕ್ಕೆ ಸಾಕ್ಷಗಳಾಗಿವೆ ಎಂದು ಟೀಕಿಸಿದ್ದಾರೆ. 
 
ಅಖಲಕ್ ಘಟನೆ, ದಲಿತರ ಮೇಲಿನ ದೌರ್ಜನ್ಯ ಸೇರಿದಂತೆ ಅನೇಕ ಘಟನೆಗಳು ನಡೆದಿದ್ದರೂ ಮೋದಿ ಸರಕಾರ ಮೌನವಾಗಿದೆ.ಆರೋಪಿಗಳಿಗೆ ಪರೋಶ್ರವಾಗಿ ಬೆಂಬಲ ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ಪ್ರಧಾನಿ ಮೋದಿ ಸರಕಾರದ ದ್ವೇಷದ ಸಿದ್ದಾಂತವನ್ನು ದೇಶದ ಪ್ರತಿಯೊಬ್ಬ ನಾಗರಿಕರು ಸೋಲಿಸಬೇಕಾಗಿದೆ ಎಂದು  ಸಿಪಿಐ(ಎಂ) ಮುಖಂಡ ಸೀತಾರಾಮ್ ಯಚೂರಿ ಕರೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಮುಖಂಡನ ವಿರುದ್ಧ ರೇಪ್ ಆರೋಪ ದಾಖಲು