ಧಾರವಾಡ : 'ಪ್ರಧಾನಿ ನರೇಂದ್ರ ಮೋದಿ ಮತ್ತು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಧ್ವನಿಯಲ್ಲಿ ಜಗಳವಿದೆ, ಹೊಡೆದಾಟವಿದೆ. ರಕ್ತಪಾತವಿದೆ ಎಂದು ಸಾಣೇಹಳ್ಳಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.
ನಗರದಲ್ಲಿ ನಡೆದ ರಾಷ್ಟ್ರೀಯ ರಂಗೋತ್ಸವದ ನಾಟಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,’ ಭಿನ್ನ ಧ್ವನಿಗಳು ಸಾಂಗತ್ಯವಾದಾಗ ಒಳ್ಳೆಯ ನಾಟಕವಾಗುತ್ತದೆ. ಒಂದು ವೇಳೆ ಧ್ವನಿ ಕರ್ಕಶವಾಗಿದ್ದರೆ ನಾಟಕ ನೋಡುಗರ ಮೆಚ್ಚುಗೆ ಪಡೆಯಲ್ಲ. ಹಾಗೆಯೇ ನಮ್ಮ ನಾಡಿಯಲ್ಲಿಯೂ ಕೆಲವು ಧ್ವನಿಗಳಿವೆ. ಪ್ರಧಾನಿ ನರೇಂದ್ರ ಮೋದಿ ಅವರದ್ದು ಒಂದು ರೀತಿಯ ಧ್ವನಿ. ಅವರನ್ನು ವಿರೋಧಿಸುವ ರಾಹುಲ್ ಗಾಂಧಿ ಧ್ವನಿಯೇ ಮತ್ತೊಂದು ರೀತಿಯಿದೆ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಹಾಗೂ ರಾಹುಲ್ ಗಾಂಧಿ ಧ್ವನಿಯಲ್ಲಿ ಜಗಳ, ಹೊಡೆದಾಟವಿದ್ದರೆ ಅದರ ವಿರುದ್ಧದ ಧ್ವನಿ ನಾಟಕದಲ್ಲಿದೆ. ನಾಟಕವು ಸಮಾಜವನ್ನು ಜಾಗೃತಿಗೊಳಿಸುತ್ತದೆ. ಸಾಮಾಜಿಕ ಪ್ರಜ್ಞೆ ಬೆಳೆಸುತ್ತದೆ, ಮಾನವೀಯ ಮೌಲ್ಯಗಳನ್ನು ತಿಳಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.