ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ಮಾಗಡಿ ಪೊಲೀಸರು ಆರೋಪಿಗಳ ವಿಚಾರಣೆ ನಡೆಸ್ತಿದ್ದಾರೆ. ಮೂವರು ಆರೋಪಿಗಳಾದ ಮೃತ್ಯುಂಜಯ ಸ್ವಾಮೀಜಿ, ನೀಲಾಂಬಿಕೆ, ಮಹದೇವಯ್ಯ ಮೊಬೈಲ್ನ್ನ FSLಗೆ ರವಾನೆ ಮಾಡಲಾಗಿದ್ದು, ಕಳೆದ 6 ತಿಂಗಳ ಕಾಲ್ ಡಿಟೇಲ್ಸ್ ಕಲೆ ಹಾಕಲು ಪೊಲೀಸರು ಮುಂದಾಗಿದ್ದಾರೆ. ಈ ಪ್ರಕರಣ ಸಂಬಂಧ ಸಚ್ಚಿದಾನಂದ ಮೂರ್ತಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ತಿಳಿಸಿದ್ದಾರೆ. ಆರೋಪಿಗಳನ್ನು ತೀವ್ರವಾಗಿ ವಿಚಾರಣೆ ನಡೆಸಲಾಗ್ತಿದ್ದು, ಆರೋಪಿಗಳು ಬಾಯಿ ಬಿಡುತ್ತಿಲ್ಲ. ರಾಮನಗರ S.P.ಸಂತೋಷ್ ಬಾಬುರಿಂದ ಕೂಡ ವಿಚಾರಣೆ ನಡೆಸಲಾಗಿದೆ. ವಿಡಿಯೋ ರೆಕಾರ್ಡ್ ಆಗಿರೋ ಮೂಲ ಮೊಬೈಲ್ಗಾಗಿ ಖಾಕಿ ಹುಡುಕಾಟ ನಡೆಸಿದೆ.