ಸಚಿವ ಸ್ಥಾನ ದೊರಕದ ಹಿನ್ನೆಲೆಯಲ್ಲಿ ಹಾಗೂ ಸಚಿವ ಪ್ರಿಯಾಂಕ ಖರ್ಗೆ ನಡೆಯಿಂದ ಮುನಿಸಿಕೊಂಡಿದ್ದ ಕಾಂಗ್ರೆಸ್ ಶಾಸಕ ಉಮೇಶ್ ಜಾಧವ ಮಾತೃ ಪಕ್ಷಕ್ಕೆ ಕೈ ಕೊಟ್ಟು ರಾಜೀನಾಮೆ ನೀಡುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.
ಕಲಬುರಗಿ ಜಿಲ್ಲೆಯ ಚಿಂಚೋಳಿಮತಕ್ಷೇತ್ರದ ಶಾಸಕಉಮೇಶ್ಜಾಧವ್ ರಾಜೀನಾಮೆಸಲ್ಲಿಸುವಸಾಧ್ಯತೆಗಳು ಹೆಚ್ಚಾಗಿವೆ. ಸ್ಪೀಕರ್ರಮೇಶ್ಕುಮಾರ್ಅವರನ್ನುಖುದ್ದುಭೇಟಿಯಾಗಿರಾಜೀನಾಮೆನೀಡಲಿದ್ದಾರೆ. ತಮ್ಮ ಮತಕ್ಷೇತ್ರದಲ್ಲಿಅಭಿವೃದ್ಧಿಕೆಲಸಆಗದಹಿನ್ನೆಲೆಯಲ್ಲಿರಾಜೀನಾಮೆನೀಡುವುದಾಗಿಜಾಧವ್ಅವರುತಮ್ಮಆಪ್ತವಲಯಗಳಿಗೆತನ್ನನಿರ್ಧಾರತಿಳಿಸಿರುವುದಾಗಿ ವದಂತಿ ಹರಿದಾಡುತ್ತಿದೆ.
ಸಚಿವ ಪ್ರಿಯಾಂಕ ಖರ್ಗೆ ಅವರು ನನ್ನ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ ಎಂದು ಅವರ ಶಾಸಕ ಉಮೇಶ ಜಾಧವ ಹಾಗೂ ಅವರ ಸಹೋದರ ದೂರಿದ್ದರು. ಕಾಂಗ್ರೆಸ್ ಮುಖಂಡರ ಸಂಪರ್ಕಕ್ಕೆ ಸಿಗದೇ ಈ ಹಿಂದೆ 15 ದಿನ ಮುಂಬೈನಲ್ಲಿ ಇದ್ದರು.