ಬ್ಲ್ಯಾಕ್ ಆಂಡ್ ವೈಟ್ ದಂಧೆಯಲ್ಲಿ ರಾಜ್ಯದ ಇಬ್ಬರು ಪ್ರಭಾವಿ ಮಂತ್ರಿಗಳು ಶಾಮೀಲಾಗಿದ್ದಾರೆ ಎಂದು ಗುತ್ತಿಗೆದಾರ ಚಂದ್ರಕಾಂತ್ ರಾಮಲಿಂಗಂ ಸಿಬಿಐ ಹಾಗೂ ಇಡಿ ತನಿಖೆಯಲ್ಲಿ ಸ್ಫೋಟಕ ಮಾಹಿತಿಯನ್ನು ಹೊರಹಾಕಿದ್ದಾನೆ.
ಅಧಿಕಾರಿಗಳಾದ ಟಿ.ಎನ್.ಚಿಕ್ಕರಾಯಪ್ಪ ಹಾಗೂ ಎಸ್.ಸಿ.ಜಯಚಂದ್ರ ಆಕ್ರಮ ಸಂಪತ್ತು ಪ್ರಕರಣದ ತನಿಖೆಯಲ್ಲಿ ಗುತ್ತಿಗೆದಾರ ಚಂದ್ರಕಾಂತ್ ರಾಮಲಿಂಗಂ ಸಾಕಷ್ಟು ಮಾಹಿತಿಗಳನ್ನು ಬಹಿರಂಗ ಪಡಿಸಿದ್ದಾನೆ.
ತಮಿಳುನಾಡು ಮೂಲದ ಬೆಂಗಳೂರಿನಲ್ಲಿರುವ ಗುತ್ತಿಗೆದಾರ ಹಾಗೂ ಬ್ಲ್ಯಾಕ್ ಆಂಡ್ ವೈಟ್ ದಂಧೆಯ ಕಿಂಗ್‌ಪಿನ್ ಆಗಿರುವ ಚಂದ್ರಕಾಂತ್ ರಾಮಲಿಂಗಂ ಹಾರ್ಡ್‌ಡಿಸ್ಕ್‌ನಲ್ಲಿರುವ ಹಲವು ಸ್ಫೋಟಕ ಮಾಹಿತಿಗಳು ಬೆಳಕಿಗೆ ಬಂದಿದ್ದು, ಇತ ಕಳೆದ ಮೂರು ವರ್ಷಗಳ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಿಟ್ಟಿದ್ದ.
ಇತ ರಾಜ್ಯದ ಇಬ್ಬರು ಪ್ರಭಾವಿ ಸಚಿವರು, 4 ಐಎಎಸ್ ಹಾಗೂ 5 ಐಪಿಎಸ್ ಅಧಿಕಾರಿಗಳು ಮತ್ತು ಎಂಟು ಕೆಎಎಸ್ ಅಧಿಕಾರಿಗಳೊಂದಿಗೆ ನಂಟು ಹೊಂದಿದ್ದ ಎಂದು ಹೇಳಲಾಗುತ್ತಿದೆ. ಹಾಗೂ ಕಪ್ಪು ಹಣವನ್ನು ಬಿಳಿ ಹಣವನ್ನಾಗಿಸುವ ಉದ್ದೇಶದಿಂದ ತಮಿಳುನಾಡಿನ ಹಲವು ಅಧಿಕಾರಿಗಳೊಂದಿಗೆ ಕೈಜೋಡಿಸಿರುವುದಾಗಿ ಬಾಯ್ಬಿಟ್ಟಿದ್ದಾನೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ