Normal
0
false
false
false
EN-US
X-NONE
X-NONE
ಬೆಂಗಳೂರು : ಬೆಂಗಳೂರಿನ ಬೊಮ್ಮನಹಳ್ಳಿ ವಲಯದ ಉಸ್ತುವಾರಿ ಸಚಿವ ಸುರೇಶ್ ಕುಮಾರ್ 2 ವಿಧಾನಸಭಾ ಕ್ಷೇತ್ರಗಳು, 16 ಬಿಬಿಎಂಪಿ ವಾರ್ಡ್ ಗಳಿಗೆ ಕೊರೊನಾ ಬಗ್ಗೆ ಕಾರ್ಯನಿರ್ವಹಿಸಲು 3 ತಂಡಗಳ ರಚನೆ ಮಾಡಿದ್ದಾರೆ.
ಅದರಲ್ಲಿ ಮೊದಲನೇಯದ್ದು ಇಂಜಿನಿಯರಿಂಗ್ ತಂಡ, ಕ್ವಾರಂಟೈನ್, ಸೀಲ್ ಡೌನ್, ಸ್ಯಾನಿಟೈಸೇಷನ್ ಹೊಣೆ ಈ ತಂಡದ್ದು ಎನ್ನಲಾಗಿದೆ. ಹಾಗೇ ಎರಡನೇಯದು ಆರೋಗ್ಯ ಇಲಾಖೆ ತಂಡ. ಐಸೋಲೇಷನ್, ಆ್ಯಂಬುಲೆನ್ಸ್ ವ್ಯವಸ್ಥೆ, ಕ್ವಾರಂಟೈನ್, ಟೆಸ್ಟ್ ಹೊಣೆ ಈ ತಂಡದ್ದು, ಮೂರನೇಯದು ಕಾಂಟ್ಯಾಕ್ಟ್ ಟ್ರೇಸಿಂಗ್ ಟೀಮ್. ಸಂಪರ್ಕ ಪತ್ತೆ ಹಚ್ಚುವುದು, ಪಟ್ಟಿ ಮಾಡುವ ಹೊಣೆ ಈ ತಂಡದ್ದು ಎನ್ನಲಾಗಿದೆ.