ಸತೀಶ್ ಜಾರಕಿಹೋಳಿಗೆ ತಲೆ ಸರಿ ಇಲ್ಲ. ಅದ್ಕೆ ಏನೇನೂ ಮಾತನಾಡುತ್ತಿದ್ದಾರೆ. ಹೀಗಂತ ಸಚಿವರೊಬ್ಬರು ಟಾಂಗ್ ನೀಡಿದ್ದಾರೆ.
ಕೊಪ್ಪಳದ ಮುನಿರಾಬಾದ್ ನಲ್ಲಿ ಸಚಿವ ರಮೇಶ ಜಾರಕಿಹೋಳಿ ಹೇಳಿಕೆ ನೀಡಿದ್ದು, ರಾಜ್ಯದಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಸಿಎಂ, ಅಧಿಕಾರಿಗಳ ಸಭೆ ನಡೆಸಿ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದಾರೆ. ಎಲ್ಲರೂ ಕೊರೊನಾ ಬಗ್ಗೆ ಜಾಗೃತಿವಹಿಸಬೇಕಾಗಿದೆ. ಒಂದು ವಾರದಲ್ಲಿ ಇದನ್ನು ಹತೋಟಿಗೆ ತರಬೇಕಾಗಿದೆ ಎಂದರು.
ಮೊದಲಿನಂತೆ ರಾಜ್ಯದಲ್ಲಿ ಜನರು ನೆಮ್ಮದಿಯಿಂದ ಓಡಾಡಬೇಕು. ಎಲ್ಲ ವ್ಯಾಪಾರ ವಹಿವಾಟುಗಳು ನಡೆಯಬೇಕಾಗಿದೆ. ರಾಜ್ಯದ ನೀರಾವರಿ ಸಮಸ್ಯೆಗಳನ್ನು ಪರಿಶೀಲಿಸುತ್ತಿದ್ದೇನೆ. ಇಂದಿನಿಂದ ಸ್ಥಳೀಯಮಟ್ಟದ ಜಲಾಶಯಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದೇನೆ. ಈ ಭಾಗದ ಸಮನಾಂತರ ಜಲಾಶಯ ನಿರ್ಮಾಣದ ಬಗ್ಗೆ ಚರ್ಚೆ ನಡೆದಿದೆ. ಇದಕ್ಕಾಗಿ 20 ಕೋಟಿಯನ್ನು ನೀಡಲಾಗಿದೆ.
ಸಮಾನಾಂತರ ಜಲಾಶಯದ ಬಗ್ಗೆ ಗಮನಹರಿಸೋಣ. ತುಂಗಾಭದ್ರ ಸಮಸ್ಯೆ ಬಗ್ಗೆನೂ ಚಿಂತಿಸೋಣ. ನಾನು ಮಂತ್ರಿ ಆದ ಕೂಡಲೇ ರಿಸಲ್ಟ್ ನೋಡಿದ್ದೀರಿ. ಮುಂದೆ ಕಾದು ನೋಡಿ ಎಲ್ಲಾ ನೀರಾವರಿ ಯೋಜನೆಗಳಿಗೆ ಪರಿಹಾರ ಸಿಗಲಿದೆ ಎಂದಿದ್ದಾರೆ.