ಬೆಂಗಳೂರು : ಸಚಿವ ರಮೇಶ್ ಜಾರಕೊಹೊಳಿ ಸೆಕ್ಸ್ ಸಿಡಿ ಬಯಲು ಪ್ರಕರಣ ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ ಎನ್ನಲಾಗಿದೆ.
5 ರಾಜ್ಯಗಳ ಚುನಾವಣೆ , ರಾಜ್ಯದಲ್ಲಿ ಉಪಚುನಾವಣೆ ಇದೆ. ಜಿ.ಪಂ., ತಾ.ಪಂ, ಚುನಾವಣೆಗಳು ಮುಂದೆ ಬರುತ್ತವೆ. ಈ ಸಮಯದಲ್ಲಿ ಇದರಿಂದ ಪಕ್ಷಕ್ಕೆ ಮುಜುಗರವಾಗುತ್ತದೆ. ಹಾಗಾಗಿ ಏನಂತ ಸಮರ್ಥನೆ ಮಾಡಿಕೊಳ್ಳೋಣ ಎಂಬ ಪ್ರಶ್ನೆ ಇದೀಗ ಬಿಜೆಪಿ ನಾಯಕರಿಗೆ ತಲೆನೋವಾಗಿದೆ ಎನ್ನಲಾಗಿದೆ. ಹೊಡೆದಾಟ ಪ್ರಕರಣ ಆಗಿದ್ರೆ ಸಮರ್ಥಿಸಿಕೊಳ್ಳಬಹುದಿತ್ತು. ಇದನ್ನು ಹೇಗೆ ಸಮರ್ಥಿಸಿಕೊಳ್ಳುವುದು ಎಂಬ ಪ್ರಶ್ನೆ ಅವರನ್ನು ಕಾಡುತ್ತಿದೆ ಎನ್ನಲಾಗಿದೆ.