ಬೆಳಗಾವಿಯ ಅಥಣಿ ತಾಲೂಕಿನ ಝಂಜರವಾಡ ಗ್ರಾಮದಲ್ಲಿ ಕೊಳವೆಬಾವಿಗೆ ಬಿದ್ದಿರುವ ಬಾಲಕಿ ಕಾವೇರಿ ಮೇಲೆತ್ತಲು 17 ಗಂಟೆಗಳಿಂದ ಕಾರ್ಯಾಚರಣೆ ನಡೆಯುತ್ತಿದೆ. ಅಗ್ನಿಶಾಮಕ ದಳ, ಎನ್`ಡಿಆರ್ಎಫ್ ಪಡೆ ಕಾರ್ಯಾಚರಣೆಯಲ್ಲಿ ತೊಡಗಿದೆ. ಈ ಸಂದರ್ಭ ವಿಳಂಬವಾಗಿ ಬಂದ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಮಾಧ್ಯಮದವರು ಪ್ರಶ್ನಿಸಿದಾಗ ಉಡಾಫೆ ಉತ್ತರ ಕೊಟ್ಟಿದ್ದಾರೆ.
ನಾನೇನು ದೇವರಾ..? ನಾನು ಬಂದಿದ್ದರೆ ಕೆಲಸವಾಗಿಬಿಡುತ್ತಿತ್ತಾ..? ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಅವರ ಬಗ್ಗೆ ನಮಗೆ ನಂಬಿಕೆ ಇದೆ. ನೀವು ಬಂದಿದ್ದೀರಾ ಎಂದು ನಾವೂ ಮೊದಲು ಬರಬೇಕಿತ್ತಾ..? ನಿರಂತರವಾಗಿ ಅಧಿಕಾರಿಗಳ ಸಂಪರ್ಕದಲ್ಲಿದ್ದೇನೆ ಎಂದಿದ್ದಾರೆ.
ಬಹಳಷ್ಟು ಕೊಳವೆಬಾವಿಗಳನ್ನ ಮುಚ್ಚಿಸಲಾಗಿದೆ. ಜಮೀನು ಮಾಲೀಕರು, ಬೋರ್ ವೆಲ್ ಏಜೆನ್ಸಿ ಮತ್ತು ಅಧಿಕಾರಿಗಳೂ ಈ ಘಟನೆ ಹೊಣೆಗಾರರು. ಕಾನೂನು ಪ್ರಕಾರ, ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ