ಲಾಕ್ ಡೌನ್ ಸಮಯದಲ್ಲಿ ತೊಂದರೆಗೆ ಸಿಲುಕಿದ್ದ ಅಸ್ಸಾಂ ಮೂಲದ ಯುವತಿಯರಿಗೆ ರಾಜ್ಯದ ಸಚಿವರೊಬ್ಬರು ನೆರವಾಗಿದ್ದಾರೆ.
ಬೆ೦ಗಳೂರಿನಲ್ಲಿ ಅಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿಗಳು ಕೋವಿಡ್-19 ಲಾಕ್ ಡೌನ್ ನಿಂದಾಗಿ ಎದುರಿಸುತ್ತಿದ್ದ ಆಹಾರ ಸಮಸ್ಯೆ ಕುರಿತು ಅಸ್ಸಾಂ ರಾಜ್ಯದ ಸಚಿವರು ಹಾಗೂ ಸಂಸ್ಕಾರ ಭಾರತಿ ಸಂಸ್ಥೆ ಪ್ರದೀಪ ದ್ವಿವೇದಿ ಅವರು ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಅವರ ಗಮನಕ್ಕೆ ತಂದಿದ್ದರು.
ತಕ್ಷಣವೇ ಸಚಿವರು ತಮ್ಮ ಕಚೇರಿ ಅಧಿಕಾರಿಗಳಿಗೆ ಸೂಚನೆ ನೀಡಿ ಆ ವಿದ್ಯಾರ್ಥಿಗಳು ಇರುವಲ್ಲಿಗೆ ಒಂದು ತಿಂಗಳಿಗೆ ಸಾಕಾಗುವಷ್ಟು ಆಹಾರ ಸಾಮಗ್ರಿಗಳನ್ನು ತಲುಪಿಸಲು ಸೂಚಿಸಿದ್ದಾರೆ. ಅದನ್ನು ಕಾರ್ಯಗತವಾಗಿರುವುದನ್ನು ಖಚಿತಗೊಳಿಸಿಕೊಂಡಿದ್ದಾರೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವರ ಆಪ್ತ ಕಾರ್ಯದರ್ಶಿ ತಿಳಿಸಿದ್ದಾರೆ.