ಎಸ್ ಡಿ ಪಿ ಐ ಸಂಘಟನೆಯ ವಿರುದ್ಧ ರಾಜ್ಯದ ಶಿಕ್ಷಣ ಸಚಿವರು ಕಿಡಿಕಾರಿದ್ದಾರೆ.
ಡಿಜೆ ಹಳ್ಳಿಯಲ್ಲಿ ನಡೆದ ಗಲಭೆಯಲ್ಲಿ ಎಸ್ಡಿಪಿಐ ಸಂಘಟನೆ ಪಾತ್ರವಿರುವುದು ಕಂಡು ಬಂದಿರುವ ಹಿನ್ನೆಲೆ ಸಂಘಟನೆ ನಿಷೇಧಿಸಬೇಕೆಂದು ಒತ್ತಾಯಿಸಿದ್ದಾರೆ.
ಎಸ್ಡಿಪಿಐ ಸಂಘಟನೆ ನಿಷೇಧಕ್ಕೆ ಸಂಪೂರ್ಣ ಸಹಮತ ವ್ಯಕ್ತಪಡಿಸಲಾಗುತ್ತದೆ ಎಂದ ಅವರು, ಗೃಹ ಸಚಿವರು ಕೇಂದ್ರ ಸರಕಾರದೊಂದಿಗೆ ಚರ್ಚೆ ನಡೆಸಿ ಎಸ್ಡಿಪಿಐ ನಿಷೇಧ ಕುರಿತು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.