Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬರಗಾಲ ಎದುರಿಸಲು ಸಜ್ಜಾಗಿ, ನೀರು ಪೋಲು ಮಾಡದಂತೆ ಸಚಿವ ಮಧು ಬಂಗಾರಪ್ಪ ಮನವಿ

ಬರಗಾಲ ಎದುರಿಸಲು ಸಜ್ಜಾಗಿ, ನೀರು ಪೋಲು ಮಾಡದಂತೆ ಸಚಿವ ಮಧು ಬಂಗಾರಪ್ಪ ಮನವಿ

Sampriya

ಹೊಸನಗರ , ಭಾನುವಾರ, 17 ಮಾರ್ಚ್ 2024 (10:23 IST)
Photo Courtesy Facebook
Photo Courtesy Facebook
ಹೊಸನಗರ: 128 ರ್ಷಗಳ ಬಳಿಕ ಮಲೆನಾಡು ಭೀಕರ ಬರಗಾಲವನ್ನು ಎದರಿಸಲಿದ್ದು ಸಾರ್ವಜನಿಕರು ಹಾಗೂ ಅಧಿಕಾರಿಗಳು ಸಜ್ಜಾಗಿರಬೇಕೆಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಮನವಿ ಮಾಡಿದರು. 
 
ಪಟ್ಟಣದ ಬಸ್ ನಿಲ್ದಾಣ ಆವರಣದಲ್ಲಿ ₹422 ಕೋಟಿ ವೆಚ್ಚದ ಹೊಸನಗರ ಪಟ್ಟಣ ಸೇರಿದಂತೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು. 
 
ಮುಂಬರುವ ಮೂರು ತಿಂಗಳ ಬೇಸಿಗೆ ಕಾಲವನ್ನು ಎದುರಿಸಲು ಸರ್ಕಾರ ಸಾಕಷ್ಟು ಸಿದ್ದತೆಯನ್ನು ಮಾಡಿಕೊಳ್ಳುತ್ತಿದೆ. ಆದರೆ ಜನರಿಗೆ ಈ ಬಗ್ಗೆ ಎಚ್ಚೆತ್ತು ನೀರನ್ನು ಪೋಲು ಮಾಡದಂತೆ ಎಚ್ಚರ ವಹಿಸಿ ಎಂದರು. 
 
ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಮಕ್ಕಳಿಗೆ ನೀರು ಉಳಿಸುವ, ಸಂರಕ್ಷಣೆ ಕುರಿತಂತೆ ಪಠ್ಯದಲ್ಲಿ ಅಳವಡಿಸಬೇಕು. ನೀರಿನ ಸದ್ಬಳಕೆ ಮಕ್ಕಳ ಮನದ ಆಳಕ್ಕೆ ಇಳಿಸಿದರೆ ಅದರ ಫಲ ಮುಂದಿನ ದಿನಗಳಲ್ಲಿ ದೊರೆಯಬಲ್ಲದು ಎಂದು ಅರಿವು ಮೂಡಿಸಿದರು. 
 

Share this Story:

Follow Webdunia kannada

ಮುಂದಿನ ಸುದ್ದಿ

ಪುನೀತ್‌ ಹುಟ್ಟು ಹಬ್ಬ: ಸಹೋದರ ರಾಘಣ್ಣ ಸೇರಿದಂತೆ ಗಣ್ಯರಿಂದ ಶುಭಾಶಯ