ಡಿವೈಎಸ್‌ಪಿ ಎಂ.ಕೆ.ಗಣಪತಿ ಪ್ರಕರಣದಲ್ಲಿ ಆರೋಪಿಯಾಗಿರುವ ಸಚಿವ ಕೆ.ಜೆ.ಜಾರ್ಜ್ ಜೈಲಿಗೆ ಹೋಗುವುದು ಖಚಿತ ಎಂದು ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಸರಕಾರದ ಒತ್ತಡದ ಮೇರೆಗೆ ಸಿಐಡಿ ಅಧಿಕಾರಿಗಳು ಅವಸರದ ತನಿಖೆ ನಡೆಸಿ ಸಚಿವ ಜಾರ್ಜ್‌ಗೆ ಕ್ಲೀನ್ ಚಿಟ್ ನೀಡಿದ್ದರು ಎಂದು ಆರೋಪಿಸಿದರು.
ಗಣಪತಿ ಆತ್ಮಹತ್ಯೆ ಮಾಡಿಕೊಂಡ ಕೋಣೆಯಲ್ಲಿ ಸಿಬಿಐ ಅಧಿಕಾರಿಗಳಿಗೆ ಬುಲೆಟ್ ದೊರೆತಿದೆ.ಸಿಬಿಐ ತನಿಖೆ ಆರಂಭಿಸಿ ಎಫ್‌ಐಆರ್ ಕೂಡಾ ದಾಖಲಿಸಿದೆ. ಮುಂದೆ ಕಾದಿದೆ ಮಾರಿಹಬ್ಬ ಎಂದರು.
ಸಿಐಡಿ ತನಿಖೆ ನಡೆಯುವಾಗ ರಾಜೀನಾಮೆ ನೀಡಿದ್ದ ಸಚಿವ ಜಾರ್ಜ್, ಸಿಬಿಐ ತನಿಖೆ ನಡೆಯುವಾಗಲು ರಾಜೀನಾಮೆ ನೀಡಲಿ. ನಾವು ವಿಧಾನಸಭೆಯಲ್ಲಿ ಯಾವುದೇ ಚರ್ಚೆ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.
ಖಾಸಗಿ ವೈದ್ಯರ ಮುಷ್ಕರದಿಂದ ಅನೇಕರ ಸಾವುಗಳು ಸಂಭವಿಸಿವೆ. ಆದ್ದರಿಂದ, ಸಚಿವ ರಮೇಶ್‌ಕುಮಾರ್‌ರನ್ನು ಕೊಲೆಗಡುಕ ಎಂದಿದ್ದೇನೆ. ನಾನು ಅವರ ವೈಯಕ್ತಿಕ ತೇಜೋವಧೆ ಮಾಡಿಲ್ಲ ಎಂದು ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.