ಬೆಂಗಳೂರಿನ ಸಂಜಯ ನಗರದಲ್ಲಿರುವ ಸಚಿವ ಎಚ್.ಸಿ.ಮಹಾದೇವಪ್ಪ ಆಪ್ತ ಅಧಿಕಾರಿ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದಾಗ 2000 ರೂ ನೋಟುಗಳ ಕೋಟಿ ಕೋಟಿ ಮೌಲ್ಯದ ಹಣ ಪತ್ತೆಯಾಗಿದೆ.
ಪೆಬಲ್‌ಬಾಯ್ ಅಪಾರ್ಟ್‌ಮೆಂಟ್ 5ನೇ ಟವರ್‌ನ 183ನೇ ಫ್ಲ್ಯಾಟ್‌ನಲ್ಲಿ ವಾಸವಾಗಿರುವ ಚೀಫ್ ಪ್ರೊಜೆಕ್ಟ್ ಆಫೀಸರ್ ಎಸ್.ಸಿ.ಜಯಚಂದ್ರ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದಾಗ 2000 ಮುಖಬೆಲೆಯ ಕೋಟಿ ಕೋಟಿ ಹಣ ಪತ್ತೆಯಾಗಿರುವುದು ದಿಗ್ಭ್ರಮೆ ಮೂಡಿಸಿದೆ.
ಪುತ್ರ ತ್ರಿಜೇಶ್ ಹೆಸರಲ್ಲಿ ತಲಾ 5 ಕೋಟಿ ಬೆಲೆಬಾಳುವ ಲ್ಯಾಂಬೋರ್ಗಿನಿ ಮತ್ತು ಪೋಸೆ ಇಂಪೋರ್ಟೆಡ್ ಕಾರುಗಳು, ಒಂದು ಬೈಕ್ ನಗದು ಹಣ ಪಾವತಿಸಿ ಖರೀದಿ ಮಾಡಿರುವುದು ಕೂಡಾ ಬೆಳಕಿಗೆ ಬಂದಿದೆ. ನಿನ್ನೆಯಿಂದ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು ಇನ್ನು ಮುಕ್ತಾಯವಾಗಿಲ್ಲ ಎನ್ನಲಾಗಿದೆ.
ಲೋಕೋಪೋಯೋಗಿ ಇಲಾಖೆಯ ಸ್ಟೇಟ್ ಹೈ-ವೇ ವಿಭಾಗದಲ್ಲಿ ಚೀಫ್ ಪ್ರೊಜೆಕ್ಟ್ ಆಫೀಸರ್ ಆಗಿ ಕಾರ್ಯನಿರ್ವಹಿಸುತ್ತಿರುವ ಜಯಚಂದ್ರ ಆದಾಯ ಮೀರಿ ಆಸ್ತಿ ಹೊಂದಿದ್ದಾರೆ ಎನ್ನುವ ದೂರು ಬಂದ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.