ಹಿರಿಯ ಸಾಹಿತಿ, ಪತ್ರಕರ್ತ ಪಾಟೀಲ್ ಪುಟ್ಟಪ್ಪನವರ ಅಗಲಿಕೆಯಿಂದ ಕನ್ನಡದ ಗಟ್ಟಿ ಧ್ವನಿ ಸ್ತಬ್ಧವಾಗಿದೆ.
ಪಾಟೀಲ ಪುಟ್ಟಪ್ಪ ಅವರು ಕರ್ನಾಟಕದ ಏಕೀಕರಣಕ್ಕೆ ತಮ್ಮದೆಯಾದ ಕೊಡುಗೆ ನೀಡಿದ್ದಾರೆ. ಕನ್ನಡದ ನೆಲ, ಜಲ, ಭಾಷೆಗೆ ತೊಂದರೆ ಉಂಟಾದಾಗ ಅವರು ಎಂದಿಗೂ ಸುಮ್ಮನೆ ಕುಳಿತವರಲ್ಲಾ. ಪತ್ರಿಕೆಯ ಮೂಲಕ ತಮ್ಮ ಮನದಾಳದ ವಿಚಾರ ಜಗತ್ತಿಗೆ ಪಾಪು ತಿಳಿಸುತ್ತಿದ್ದರು ಎಂದು ಕೃಷಿ ಸಚಿವ ಬಿ ಸಿ ಪಾಟೀಲ ತಿಳಿಸಿದ್ದಾರೆ.
ಅಗಲಿದ ಹಿರಿಯ ಪತ್ರಕರ್ತ, ಸಾಹಿತಿ, ನಾಡೋಜ ಡಾ. ಪಾಟೀಲ ಪುಟ್ಟಪ್ಪ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಮಾತನಾಡಿದ ಸಚಿವರು, ಅವರಿಗೆ ನನ್ನ ಮೇಲೆ ಬಹಳ ಪ್ರೀತಿ. ನನ್ನ ಹುಟ್ಟು ಹಬ್ಬದ ಸಂದರ್ಭ ನನಗೆ ಸಂದೇಶ ಕಳುಹಿಸಿದ್ದರು. ನಾನೊಬ್ಬ ಮಂತ್ರಿಯಾಗಬೇಕು ಎಂಬುದು ಅವರ ಬಹಳ ವರ್ಷದ ಆಸೆಯಾಗಿತ್ತು. ನಾನು ಮಂತ್ರಿಯಾದ ಮೇಲೆ ಅವರನ್ನು ಕಿಮ್ಸ್ ಆಸ್ಪತ್ರೆಗೆ ಹೋಗಿ ಭೇಟಿಯಾಗಿ ಬಂದೆ. ಕನ್ನಡದ ಸಾಹಿತ್ಯ ಲೋಕ ಬಡವಾಗಿದೆ. ಅವರಿಗೆ ಮತ್ತೊಬ್ಬರು ಸರಿಸಾಟಿಯಾಗಲು ಸಾಧ್ಯವಿಲ್ಲಾ. ಪಾಟೀಲ್ ಪುಟ್ಟಪ್ಪ ಅವರಿಗೆ ಪಾಟೀಲ್ ಪುಟ್ಟಪ್ಪನವರೆ ಸರಿಸಾಟಿ ಎಂದರು.