ವಿದ್ಯಾರ್ಥಿನಿಯರ ಉನ್ನತ ಶಿಕ್ಷಣದ ಕನಸನ್ನು ನನಸಾಗಿಸಬಲ್ಲ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯಕ್ಕೆ ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅವರು ಇಂದು ಚಾಲನೆ ನೀಡಿದರು.ಬಳಿಕ ಮಾತನಾಡಿದ ಅವರು,ಮೈಸೂರು ಮಹಾರಾಜರು ಸೃಷ್ಟಿಸಿದ ವೈಭವೋಪೇತ ಇತಿಹಾಸವು ಈ ಮೂಲಕ ಮರುಕಳಿಸಿದೆ. ಇದಕ್ಕೆ ತಕ್ಕಂತೆ ಪ್ರಧಾನಿ ನರೇಂದ್ರ ಮೋದಿಯವರು ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿಯು ಚಾರಿತ್ರಿಕವಾಗಿದೆ...ಎನ್ಇಪಿಯಲ್ಲಿ ವಿದ್ಯಾರ್ಥಿಗಳ ಸಮಗ್ರ ಕಲಿಕೆಗೆ ಒತ್ತು ಕೊಟ್ಟಿದೆ. ಬ್ರಿಟಿಷರ ಕಾಲದಲ್ಲಿ ಕೇವಲ ಕಂಟೋನ್ಮೆಂಟ್ ಆಗಿದ್ದ ಬೆಂಗಳೂರು ನಗರವು ಇಂದು ಜಗತ್ತಿನ ಎಲ್ಲ ಸಮಸ್ಯೆಗಳಿಗೂ ಪರಿಹಾರ ಕಂಡುಹಿಡಿಯುವಂತಹ ತಾಣವಾಗಿದೆ ಎಂದು ಅವರು ಬಣ್ಣಿಸಿದರು....ಗುಣಮಟ್ಟದ ಶಿಕ್ಷಣ ಕೊಡಲು ಸರಕಾರವು ಉನ್ನತ ಶಿಕ್ಷಣ ವಲಯದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರುತ್ತಿದೆ. ಕಲಿಕೆಯ ಹಂತದಲ್ಲಿ ಸಾಹಸಪ್ರವೃತ್ತಿ ಇರಬೇಕೇ ವಿನಾ ಬೇಲಿ ಹಾಕಿಕೊಂಡು ಕೂರಬಾರದು ಎಂದು ಅವರು ಪ್ರತಿಪಾದಿಸಿದರು