ಎಂಜಿ ರಸ್ತೆಯಲ್ಲೇ ಅವ್ಯವಹಾರವಾಗಿರುವುದನ್ನು ಖಂಡಿಸಿ ನಾಯಕರ ಪಡೆ ವಿಭಿನ್ನ ರೀತಿಯ ಹೋರಾಟ ನಡೆದಿದೆ.
ಎಂಜಿ ರಸ್ತೆ ಕಾಮಗಾರಿಯಲ್ಲಿ ಆಗಿರುವ ಅವ್ಯವಹಾರದಲ್ಲಿ ಭಾಗಿಯಾದ ಪಾಲಿಕೆ ಅಧಿಕಾರಿಗಳ ವಿರುದ್ಧ ಕಿಮಿನಲ್ ಪ್ರಕರಣಕ್ಕೆ ಒತ್ತಾಯಿಸಿ ಅಂಚೆ ಚಳುವಳಿ ನಡೆದಿದೆ. ಮೈಸೂರು ನಾಯಕರ ಪಡೆಯಿಂದ ಅಂಚೆ ಚಳುವಳಿ ನಡೆಸಲಾಗಿದೆ.
ಮೈಸೂರು ನಗರದ ಕೋರ್ಟ್ ಎದುರಿನ ಅಂಚೆ ಪೆಟ್ಟಿಗೆ ಬಳಿ ಪತ್ರ ಚಳುವಳಿ ಮೂಲಕ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು. ಪಾಲಿಕೆಯ ಭ್ರಷ್ಟ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಲಾಯಿತು.
ಸಿಎಂ ಕುಮಾರಸ್ವಾಮಿ ತನಿಖೆಗೆ ಆದೇಶ ನೀಡುವಂತೆ ಅಂಚೆ ಚಳುವಳಿಯಲ್ಲಿ ಒತ್ತಾಯ ಮಾಡಲಾಯಿತು. ಸಾರ್ವಜನಿಕರ ಕೋಟಿ ಕೋಟಿ ಹಣವನ್ನ ಪಾಲಿಕೆ ಅಧಿಕಾರಿಗಳು ಲೂಟಿ ಮಾಡಿದ್ದಾರೆ. ಇಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯ ಮಾಡಿದರು. ಪಾಲಿಕೆ ಅಧಿಕಾರಿಗಳು ಲೂಟಿ ಮಾಡಿರುವ ಹಣವನ್ನ ವಾಪಸ್ ಪಡೆಯಬೇಕು ಪ್ರತಿಭಟನಾಕಾರರು ಆಗ್ರಹ ಮಾಡಿದರು.