ರಾಸಲೀಲೆ ಪ್ರಕರಣದ ಆರೋಪ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಎಚ್.ವೈ.ಮೇಟಿ ಬೆಂಬಲಕ್ಕೆ ಪ್ರಗತಿಪರ ಚಿಂತಕರು ನಿಂತಿದ್ದು, ಮೇಟಿ ಅವರನ್ನು ರಾಜ್ಯ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಿ ಎಂದು ಪ್ರಗತಿಪರ ಚಿಂತಕ ಅಗ್ನಿ ಶ್ರೀಧರ ಆಗ್ರಹಿಸಿದ್ದಾರೆ.
ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾಜಿ ಸಚಿವ ಎಚ್.ವೈ.ಮೇಟಿ ಅಮಾಯಕ. ರಾಸಲೀಲೆ ಪ್ರಕರಣದಲ್ಲಿ ಸಂತ್ರಸ್ತೆ ವಿಜಯಲಕ್ಷ್ಮೀ ಹಾಗೂ ಆರ್‌ಟಿಐ ಕಾರ್ಯಕರ್ತ ರಾಜಶೇಖರ್ ಮುಲಾಲಿ ಅವರು ಸಚಿವರ ವಿರುದ್ಧ ಷಡ್ಯಂತ್ರ ರೂಪಿಸಿದ್ದರು ಎಂದು ಆರೋಪಿಸಿದರು.
ರಾಸಲೀಲೆಯ ಸಿಡಿ ಬಹಿರಂಗವಾದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಚ್.ವೈ.ಮೇಟಿ ಅವರ ರಾಜೀನಾಮೆ ಕೇಳಿದ್ದು ತಪ್ಪು. ಹೀಗಾಗಿ ಮೇಟಿ ಅವರನ್ನು ಮತ್ತೆ ರಾಜ್ಯ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಎಚ್.ವೈ.ಮೇಟಿ ರಾಸಲೀಲೆ ವಿಡಿಯೋ ಸಿಡಿಯನ್ನು ದೆಹಲಿಯಲ್ಲಿ ಆರ್‌ಟಿಐ ಕಾರ್ಯಕರ್ತ ರಾಜಶೇಖರ್ ಮುಲಾಲಿ ಅವರು ಬಿಡುಗಡೆಗೊಳಿಸಿದ್ದರು. ಸಚಿವರ ರಾಸಲೀಲೆ ಸಿಡಿ ಬಿಡುಗಡೆಯಾಗುತಿದ್ದಂತೆ ನೈತಿಕ ಹೊಣೆ ಹೊತ್ತು ಅಬಕಾರಿ ಸಚಿವ ಎಚ್.ವೈ.ಮೇಟಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.