Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬಾಣಂತಿಯರು, ಗರ್ಭಿಣಿಯರಿಗೆ ಊಟದ ವ್ಯವಸ್ಥೆ!

ಬಾಣಂತಿಯರು, ಗರ್ಭಿಣಿಯರಿಗೆ ಊಟದ ವ್ಯವಸ್ಥೆ!
Bangalore , ಸೋಮವಾರ, 13 ಮಾರ್ಚ್ 2017 (10:19 IST)
ಬೆಂಗಳೂರು: ಹಲವು ‘ಭಾಗ್ಯ’ ಯೋಜನೆಗಳ ನಂತರ ರಾಜ್ಯ ಸರ್ಕಾರ ಗರ್ಭಿಣಿ ಮತ್ತು ಬಾಣಂತಿಯರಿಗೆ ಊಟ ಒದಗಿಸುವ ಹೊಸ ಯೋಜನೆಗೆ ಚಾಲನೆ ನೀಡಲಿದೆ.

 
ಮಾತೃಪೂರ್ಣ ಎಂಬ ಹೆಸರಿನ ಯೋಜನೆ ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ. ಆರಂಭದಲ್ಲಿ ಇದು ಪ್ರಾಯೋಗಿಕವಾಗಿ ನಾಲ್ಕು ತಾಲೂಕುಗಳಲ್ಲಿ ಜಾರಿಗೆ ಬರಲಿದೆ. ನಂತರ ಇದನ್ನು ರಾಜ್ಯಾದ್ಯಂತ ಜಾರಿಗೆ ತರಲು ಉದ್ದೇಶಿಸಲಾಗಿದೆ.

ಈ ತಾಲೂಕುಗಳ ಅಂಗನವಾಡಿ ಕೇಂದ್ರಗಳಲ್ಲಿ ಗರ್ಭಿಣಿ ಮತ್ತು ಬಾಣಂತಿಯರಿಗೆ ಪೌಷ್ಠಿಕ ಆಹಾರ ಒದಗಿಸಲಾಗುತ್ತದೆ. ಮೈಸೂರು, ತುಮಕೂರು, ಎಚ್ ಡಿ ಕೋಟೆಯಲ್ಲಿ ಇದು ಪ್ರಾಯೋಗಿಕವಾಗಿ ಜಾರಿಗೆ ಬರಲಿದೆ. ಅಪೌಷ್ಠಿಕತೆ ನಿರ್ಮೂಲನೆ ಮಾಡುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

2 ತಿಂಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದ ಬಂಗಾರದ ಬೆಲೆ