ಬಾಡಿ ಮಸಾಜ್ ಪಾರ್ಲರ್ಗಳ ಮೇಲೆ ಮೇಯರ್ ದಾಳಿ ನಡೆಸಿ ಬಿಸಿ ಮುಟ್ಟಿಸಿದ ಘಟನೆ ವರದಿಯಾಗಿದೆ.
ಮಂಗಳೂರು ಪಾಲಿಕೆ ಮೇಯರ್ ಕವಿತಾ, ಬಾಡಿ ಮಸಾಜ್ ಪಾರ್ಲರ್ಗಳ ಮೇಲೆ ದಾಳಿ ನಡೆಸಿದಾಗ, ಹಲವು ಪಾರ್ಲರ್ಗಳಲ್ಲಿ ಕಾನೂನುಬಾಹಿರ ಚಟುವಟಿಕೆ ನಡೆದಿರುವುದು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ನಗರದ ಖ್ಯಾತ ಗ್ರೀನ್ ವ್ಯಾಲಿ ಯುನಿಸೆಕ್ಸ್ ಸಲೂನ್ ಮೇಲೆ ದಾಳಿ ಮಾಡಿದಾಗ, ಯುವತಿಯರಿಂದ ಬಾಡಿ ಮಸಾಜ್ ಮಾಡಿಕೊಳ್ಳುತ್ತಿದ್ದ ಯುವಕರು ಕಂಡು ಗರಂ ಆದ ಮೇಯರ್, ಯುವಕರಿಗೆ ಮಸಾಜ್ ಮಾಡಲು ಪುರುಷರಿಲ್ಲವೇ ಎಂದು ಪ್ರಶ್ನಿಸಿ ಪಾರ್ಲರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.