ಸ್ಯಾಂಟ್ರೋ ರವಿ ಹಿಂದೆ ಇರೋ ಮುಖವಾಡಗಳು ಕಳಚಿ ಬೀಳಬೇಕು. ಸ್ಯಾಂಟ್ರೋ ರವಿ ಪ್ರಕರಣ ಸಿಐಡಿಗೆ ನೀಡಲಾಗಿದೆ ಅಂತ ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸ್ಯಾಂಟ್ರೋ ರವಿ ಕೇಸನ್ನು ಸಿಐಡಿಗೆ ವಹಿಸಲಾಗಿದೆ. ಮೈಸೂರು ಪೊಲೀಸರು ತನಿಖೆ ಮಾಡುತ್ತಿದ್ದರು. ತನಿಖೆ ಮತ್ತಷ್ಟು ಪಾರದರ್ಶಕವಾಗಿ ನಡೆಯಲು. ಯಾವುದೇ ಅನುಮಾನ ಕೇಸ್ನಲ್ಲಿ ಬಾರದಂತೆ ತನಿಖೆ ಮಾಡಲು ಸಿಐಡಿಗೆ ವಹಿಸಲಾಗಿದೆ. ಪಿಎಸ್‌ಐ ಕೇಸ್ ತನಿಖೆ ಮಾಡಿದ ತಂಡವೇ ಈ ಕೇಸ್ ತನಿಖೆ ಮಾಡುತ್ತದೆ. ತನಿಖೆ ಪ್ರಾಮಾಣಿಕವಾಗಿ ನಡೆದು ತಪ್ಪಿತಸ್ಥರಿಗೆ ಕ್ರಮ ಆಗುವಂತೆ ಕ್ರಮ ಆಗಬೇಕು ಅಂತ ಸೂಚನೆ ನೀಡಿದ್ದೇವೆ ಎಂದರು. ಸ್ಯಾಂಟ್ರೋ ರವಿ ಮೇಲೆ ಅತ್ಯಾಚಾರ, ಕೊಲೆ, ಕಿರುಕುಳ, ವರದಕ್ಷಿಣೆ ಸೇರಿ ಅನೇಕ ಪ್ರಕರಣಗಳು ಇವೆ. ಇದರ ಸಂಪೂರ್ಣ ತನಿಖೆ ಆಗಲಿದೆ. ಸಾರ್ವಜನಿಕವಾಗಿ ಚರ್ಚೆ ಆಗಿರುವ ಪ್ರಕರಣ ಇದು. ಇದರ ಹಿಂದೆ ಯಾರೆಲ್ಲಾ ಇದ್ದಾರೆ ಅಂತ ಗೊತ್ತಾಗಬೇಕು. ಯಾರೆಲ್ಲ ಸ್ಯಾಂಟ್ರೋ ರವಿ ಜೊತೆ ಇದ್ದರೋ ಅವರ ಮುಖವಾಡ ಕಳಚಿ ಹೊರಗೆ ತೆಗೆಯಬೇಕು. 20 ವರ್ಷದ ಹಿಂದೆ ಯಾರ ಜೊತೆ ರವಿ ಸಂಬಂಧ ಇಟ್ಟುಕೊಂಡಿದ್ದ ಅನ್ನೋದು ಜನರಿಗೆ ಗೊತ್ತಾಗಬೇಕು. ಹೀಗಾಗಿ ಸಿಐಡಿ ತನಿಖೆಗೆ ವಹಿಸಲಾಗಿದೆ. ಒಳ್ಳೆ ರೀತಿ ತನಿಖೆ ಆಗಬೇಕು ಅಂತ ಸಿಐಡಿಗೆ ವಹಿಸಲಾಗಿದೆ ಎಂದರು.