ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಯ ದರ್ಶನವನ್ನ ಬೆಳಗ್ಗೆಯಿಂದ ತಾತ್ಕಲಿಕವಾಗಿ ನಿಲ್ಲಿಸಲಾಗಿದೆ.
ಎಂದಿನಂತೆ ಮಠದ ಎಲ್ಲ ಬಾಗಿಲುಗಳನ್ನ ಮುಚ್ಚಲಾಗಿದ್ದು, ಭಕ್ತಾದಿಗಳು ಮಠದ ಆವರಣದಲ್ಲಿ ರಾತ್ರಿ ವೇಳೆ ಮಲಗಿದ್ದರು. ಆದರೆ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಗ್ರಹಣ ಆರಂಭವಾದ ನಂತರ ಮಠದ ಆವರಣದಲ್ಲಿ ಲೋಕ ಕಲ್ಯಾಣಾರ್ಥವಾಗಿ ಹೋಮ ಮಾಡಲಾಗುವುದು ಅಂತಾ ಮಠದ ಆಡಳಿತ ಮಂಡಳಿ ತಿಳಿಸಿದೆ. ಹೀಗಾಗಿ ಚಂದ್ರಗ್ರಹಣದ ನಂತರ ಮಠದಲ್ಲಿ ವಿಶೇಷ ಹೋಮ, ಪೂಜಾ ವಿಧಿ ವಿಧಾನಗಳು ಜರುಗಿದವು.
ರಾಯರ ಕಾಣಲು ಕಾತುರರಾಗಿದ್ದ ಜನರಲ್ಲಿ ಗ್ರಹಣದ ಮೊದಲು ನಿರಾಸೆ ಕಂಡು ಬಂದರೂ ಆ ಬಳಿಕ ಶ್ರದ್ಧಾ, ಭಕ್ತಿಯಿಂದ ದೇವರ ಮೊರೆ ಹೋದರು.