ಉಮೇಶ್ ಪ್ರೀತಿ ನಾಟಕವಾಡಿ ಹಣ ದೋಚಿದ ವ್ಯಕ್ತಿ. ಯುವತಿಯೊಬ್ಬಳನ್ನು ಸ್ನೇಹ ಮಾಡಿಕೊಂಡ ಈತ ಪ್ರೀತಿಯ ನಾಟಕವಾಡಿ ಮದುವೆಯಾಗುವುದಾಗಿ ನಂಬಿಸಿ ತನ್ನ ಉನ್ನತ ಶಿಕ್ಷಣಕ್ಕೆ ಹಣ ಬೇಕೆಂದು ಆಕೆಯಿಂದ 15 ಲಕ್ಷ ರೂಪಾಯಿ ಪಡೆದುಕೊಂಡಿದ್ದಾನೆ.
ಆದರೆ ಆತ ಅನೇಕ ಯುವತಿಯರ ಜೊತೆ ಪ್ರೀತಿಯ ನಾಟಕವಾಡಿ ಅನೈತಿಕ ಸಂಬಂಧ ಹೊಂದಿದ್ದ ಎಂಬ ವಿಚಾರ ತಿಳಿದ ಯುವತಿ ಆತನಿಂದ ಹಣ ವಾಪಾಸು ಕೇಳಿದ್ದಾಳೆ. ಆದರೆ ಆತ ಆಕೆಯ ಮೇಲೆ ದೌರ್ಜನ್ಯವೆಸಗಿದ್ದ ಹಿನ್ನಲೆಯಲ್ಲಿ ಇದೀಗ ಯುವತಿ ಚಿತ್ರದುರ್ಗದ ಮಹಿಳಾ ಠಾಣೆ ಪೊಲೀಸರಿಗೆ ದೂರು ನೀಡಿದ್ದಾಳೆ.