ಬೆಳಗಾವಿ ಜಿಲ್ಲೆಯ ಹಂಚಿನಾಳ ಗ್ರಾಮದಲ್ಲಿ ನಿನ್ನೆ ಸಂಭವಿಸಿದ ಅಗ್ನಿ ಅವಘಡದಲ್ಲಿ 70 ಮನೆಗಳು, 70 ಹುಲ್ಲಿನ ಬಣವೆಗಳು, 3 ಜಾನುವಾರುಗಳು ಸುಟ್ಟು ಭಸ್ಮವಾಗಿವೆ. ಅದೃಷ್ವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಮನೆಗಳನ್ನ ಕಳೆದುಕೊಂಡ ಗ್ರಾಮಸ್ಥರು ರಾತ್ರಿ ಇಡೀ ಶಾಲೆಯಲ್ಲೇ ಆಶ್ರಯ ಪಡೆದಿದ್ದರು. ಶಾಲಾ ಆವರಣದಲ್ಲೇ ಅಡುಗೆ ಮಾಡಿಕೊಂಡು ಅಲ್ಲಿಯೇ ಸೇವನೆ ಮಾಡಿದ್ದಾರೆ. ಅಗ್ನಿ ಅವಘಡದಿಂದ ಗ್ರಾಮಸ್ಥರ ಎತ್ತಿನ ಬಂಡಿಗಳು, ಗೃಹೋಪಯೋಗಿ ವಸ್ತುಗಳು ಎಲ್ಲವನ್ನೂ ಗ್ರಾಮಸ್ಥರು ಕಳೆದುಕೊಂಡಿದ್ದಾರೆ.
ಸದ್ಯ, ಬೆಂಕಿ ಹತೋಟಿಗೆ ಬಂದಿದ್ದು, ಸಚಿವ ರಮೇಶ್ ಜಾರಕಿಹೊಳಿ ಸ್ಥಳಕ್ಕೆ ಭೇಟಿ ನೀಡಿ ಪರಿಸೀಲನೆ ನಡೆಸಿದ್ದಾರೆ. ಮನೆ ಕಳೆದುಕೊಂಡವರಿಗಾಗಿ ಬಸವ ವಸತಿ ಯೋಜನೆಯಡಿ 100 ಮನೆ ಮನೆಗಳನ್ನ ನಿರ್ಮಿಸಲಾಗುತ್ತೆ. 2 ದಿನಗಳಲ್ಲಿ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ