ಗುಂಡ್ಲುಪೇಟೆ ಮತ್ತು ನಂಜನಗೂಡಿನಲ್ಲಿ ಶಾಂತಿಯುತ ಮತದಾನ ನಡೆಯುತ್ತಿದೆ. ನಂಜನಗೂಡಿನ ಮಹದೇವನಗರ ಬೂತ್`ನಲ್ಲಿ ಮತದಾನವನ್ನ ಬಹಿಷ್ಕರಿಸಲಾಗಿದೆ. ರಸ್ತೆ ಡಾಂಬರೀಕರಣ ಸೇರಿದಂತೆ ಮೂಲಭೂತ ಸೌಕರ್ಯಗಳಿಗೆ ಒತ್ತಾಯಿಸಿ ಮತದಾನ ಬಹಿಷ್ಕರಿಸಲಾಗಿದೆ. 700 ಮತದಾರರಿರುವ ಈ ಬೂತ್`ನಲ್ಲಿ ಕೇವಲ 12 ಮಂದಿ ಮತ ಚಲಾಯಿಸಿದ್ದಾರೆ.
ಇತ್ತ, ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೃಷ್ಣಮೂರ್ತಿ ಪಕ್ಷದ ಚಿಹ್ನೆಯುಳ್ಳ ಶಾಲು ಧರಿಸಿ ಮತದಾನ ಮಾಡುವ ಮೂಲಕ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಗುಂಡ್ಲುಪೇಟೆಯ ಅಣ್ಣೂರುಕೇರಿ ಮತಗಟ್ಟೆಯಲ್ಲಿ 90 ವರ್ಷದ ವೃದ್ಧೆ ನಾಗಮ್ಮ ಮತದಾನ ಮಾಡಿದರು. ಬದನವಾಳು ಗ್ರಾಮದಲ್ಲಿ 85 ವರ್ಷದ ವೃದ್ಧೆಯನ್ನ ಹೊತ್ತು ತಂದ ಮಗ ವೋಟ್ ಹಾಕಿಸಿದರು.
ಇತ್ತ, ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹದೇವಪ್ರಸಾದ್, ಮಾರಮ್ಮದೇವಿಗೆ ಪೂಜೆ ಸಲ್ಲಿಸಿ, ಬಳಿಕ ಮಹದೇವಪ್ರಸಾದ್ ಸಮಾಧಿ ಸ್ಥಳಕ್ಕೆ ತೆರಳಿ ಪೂಜೆ ಸಲ್ಲಿಸಿದ ಬಳಿಕ ಮತದಾನ ಮಾಡಿದ್ದಾರೆ.