ಮಹತ್ವದ ರಾಜಕೀಯ ಬೆಳವಣಿಗೆ ಕಾಂಗ್ರೆಸ್ ನಲ್ಲಿ ನಡೆದಿದ್ದು, ಕೆಲವು ಕೈ ನಾಯಕರು ಕೈ ಕೈ ಹಿಸುಕಿಕೊಳ್ಳುವಂತೆ ಮಾಡಿದೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೆಸರು ಕೇಳಿಬರುತ್ತಿರುವಾಗಲೇ ಈ ನಡುವೆ ಮಾಜಿ ಗೃಹ ಸಚಿವ ಹಾಗೂ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ ಎಂ.ಬಿ.ಪಾಟೀಲ್ ನೂತನ ಕೆಪಿಸಿಸಿ ಅಧ್ಯಕ್ಷರಾಗೋದು ಖಚಿತವಾದಂತಿದೆ.
ಹೀಗೊಂದು ಸುದ್ದಿ ಸ್ವತಃ ಕಾಂಗ್ರೆಸ್ ವಲಯದಿಂದಲೇ ಹರಿದಾಡಲಾರಂಭಿಸಿದೆ. ಇದು ಡಿಕೆಶಿ ಟೀಂ ಕೆಂಗಣ್ಣಿಗೆ ಗುರಿಯಾಗಿದೆ.
ಸಿಎಂ ಬಿ.ಎಸ್.ಯಡಿಯೂರಪ್ಪ ಲಿಂಗಾಯತರ ಪ್ರಬಲ ನಾಯಕರಾಗಿದ್ದಾರೆ.
ಹೀಗಾಗಿ ಲಿಂಗಾಯತ ಸಮುದಾಯಕ್ಕೆ ಸೇರಿರೋ ಎಂ.ಬಿ.ಪಾಟೀಲ್ ರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದರೆ ಮುಂಬರೋ ಚುನಾವಣೆಯಲ್ಲಿ ಮೇಲುಗೈ ಸಾಧಿಸಬಹುದು.
ಹೀಗಂತ ಸಿದ್ದರಾಮಯ್ಯ ನೇತೃತ್ವದ ಬಣದ ನಾಯಕರು, ಕಾರ್ಯಕರ್ತರಿಂದ ಲೆಕ್ಕಾಚಾರ ಮಾಡ್ತಿರೋ ಸುದ್ದಿ ಹರಿದಾಡಲಾರಂಭಿಸಿದೆಯಂತೆ.