ಶ್ರೀರಾಮ ಶೂದ್ರನಾಗಿದ್ದ, ಅವನು ಮಹಿಳೆಯರ ವಿರೋಧಿಯಾಗಿದ್ದ ಎಂದು ಪ್ರೊ.ಕೆ.ಎಸ್. ಭಗವಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರೊ.ಕೆ.ಎಸ್.ಭಗವಾನ್, ರಾಮನ ಬಗ್ಗೆ ಮಾತನಾಡುವವರು ವಾಲ್ಮೀಕಿ ರಾಮಾಯಣ ಓದಿಲ್ಲ. ಶ್ರೀ ರಾಮನು ತುಂಬು ಗರ್ಭಿಣಿಯನ್ನು ಕಾಡಿಗೆ ಕಳಿಸಿದ್ದ. ಮಹಿಳೆಯರಿಗೆ ರಾಮನು ಎಂದಿಗೂ ಅಧಿಕಾರ ಕೊಟ್ಟಿಲ್ಲ ಎಂದರು.
ರಾಮ ಶೂದ್ರನಾಗಿದ್ದಾನೆ. ಸ್ತ್ರೀ ವಿರೋಧಿಯಾಗಿದ್ದಾನೆ ಎಂದಿರುವ ಅವರು, ನಮಗೆ ರಾಮ ರಾಜ್ಯ ಬೇಡ, ಭೀಮ ರಾಜ್ಯ ಬೇಕು ಎಂದು ಹೇಳಿದ್ದಾರೆ.
ಮನೆಯಲ್ಲಿ ರಾಮನ ಫೋಟೋ ಇಟ್ಕೋತೀರಿ ಆದರೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಫೋಟೋ ಇಟ್ಟಿಕೊಳ್ಳಲ್ಲ. ಬುದ್ದನನ್ನು ವೈದಿಕರು ಹೊರಗೆ ಇಟ್ಟಿದ್ದಾರೆ ಎಂದು ಟೀಕಿಸಿದ ಅವರು, ಶಂಕರಾಚಾರ್ಯ ಹಾಗೂ ಮಧ್ವಾಚಾರ್ಯರಲ್ಲಿ ಮಾನವೀಯತೆ ಎಂಬುದೇ ಇಲ್ಲ ಎಂದು ಟೀಕೆ ಮಾಡಿದ್ದಾರೆ.
ಪ್ರೊ.ಕೆ.ಎಸ್.ಭಗವಾನ್ ನೀಡಿರುವ ಈ ಹೇಳಿಕೆ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.