ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ್ದಾರೆ ಎನ್ನುವ ಪ್ರಕರಣದ ತನಿಖೆಯನ್ನು ಲೋಕಾಯುಕ್ತ ಕೋರ್ಟ್ ಭ್ರಷ್ಟಾಚಾರ ನಿಗ್ರಹ ದಳಕ್ಕೆ ವಹಿಸಿದೆ.
ಶಾಸಕ ಸಿ.ಟಿ.ರವಿ ಆಕ್ರಮ ಆಸ್ತಿ ಗಳಿಸಿದ್ದಾರೆಂದು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಚಿಕ್ಕಮಗಳೂರಿನ ಎ.ಸಿ.ಕುಮಾರ್ ಎನ್ನುವವರು ದೂರು ನೀಡಿದ್ದರು. ಈ ಕುರಿತು ತನಿಖೆಗೆ ಆದೇಶಿಸುವಂತೆ 2012ರಲ್ಲೇ ಕೋರ್ಟ್ ಮೆಟ್ಟಿಲೇರಿ ಮನವಿ ಮಾಡಿದ್ದರು.
2005 ರ ಸಾಲಿನಲ್ಲಿ ರವಿ ತಮ್ಮ ಆಸ್ತಿಯ ಮೌಲ್ಯ 10.10 ಲಕ್ಷ ರೂಪಾಯಿ ಎಂದು ಘೋಷಿಸಿದ್ದರು. ವಾರ್ಷಿಕ ಆದಾಯ 1.20 ಲಕ್ಷ ಎಂದು ಪ್ರಕಟಿಸಿದ್ದರು. 2008 ರಲ್ಲಿ ಅವರ ವಾರ್ಷಿಕ ಆದಾಯ 18.09 ಲಕ್ಷ ರೂಪಾಯಿ ಇತ್ತು. ಈ ಅವಧಿಯಲ್ಲಿ ಅವರ ಆಸ್ತಿಯ ಒಟ್ಟು ಮೌಲ್ಯ 93 ಲಕ್ಷ ರೂಪಾಯಿಗೆ ಏರಿಕೆಯಾಗಿದೆ. 2009 ರಲ್ಲಿ ಆಸ್ತಿಯ ಮೌಲ್ಯ 1.60 ಕೋಟಿಗೆ ಹೆಚ್ಚಳವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ