ಬೆಂಗಳೂರು : ಲೋಕಸಭಾ ಚುನಾವಣೆ ಘೋಷಣೆಯಾದ ಹಿನ್ನಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಬೆಂಗಳೂರಿನ ಹಲವು ಕಡೆ ಸಿಸಿಟಿವಿಗಳನ್ನು ಅಳವಡಿಸಲಾಗಿದೆ.
ಸಿಲಿಕಾನ್ ಸಿಟಿಯಲ್ಲಿ ಬರೋಬ್ಬರಿ 5 ಸಾವಿರ ಸಿಸಿಟಿವಿಗಳನ್ನು ಎಲೆಕ್ಷನ್ ಕೆಲಸಗಳಿಗಾಗಿ ಫಿಕ್ಸ್ ಮಾಡಲಾಗಿದೆ. ಬಿಬಿಎಂಪಿ ವತಿಯಿಂದ 198 ವಾರ್ಡ್ ಗಳಲ್ಲಿ 4 ಸಾವಿರ ಸಿಸಿಟಿವಿಗಳಿವೆ. ಇತ್ತ ಟ್ರಾಫಿಕ್ ಜಂಕ್ಷನ್ ಗಳಲ್ಲೂ 1 ಸಾವಿರಕ್ಕೂ ಹೆಚ್ಚು ಸಿಸಿಟಿವಿ ಇದೆ. ಈ ಎಲ್ಲ ಕ್ಯಾಮೆರಾಗಳು ಚುನಾವಣೆಗಾಗಿ ಕೆಲಸ ಮಾಡುತ್ತವೆ.
ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮತ್ತು ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಜಂಟಿಯಾಗಿ ಚರ್ಚಿಸಿ ಈ ನೂತನ ಐಡಿಯಾವನ್ನು ಹುಡುಕಿದ್ದು, ‘ಸಿಸಿಟಿವಿ ಅಳವಡಿಕೆಯಿಂದ ಚುನಾವಣೆ ಸಮಯದಲ್ಲಿ ಮನಬಂದಂತೆ ಮತದಾರರಿಗೆ ಸೀರೆ, ಬಟ್ಟೆ, ದುಡ್ಡು ಇನ್ನಿತರೆ ವಸ್ತುಗಳನ್ನು ಕೊಡುವುದಕ್ಕೆ ಆಗಲ್ಲ. ಚುನಾವಣೆ ಸಂದರ್ಭದಲ್ಲಿ ಯಾವುದೇ ಅಹಿತರ ಘಟನೆ ನಡೆಯಬಾದರೆಂದು ಕ್ಯಾಮೆರಾಗಳನ್ನು ಅಳವಡಿಸಲಾಗಿದೆ’ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.